ಸಾಮಾಗ್ರಿಗಳು
ಚಿಕನ್ ಸ್ಟಾಕ್ – 3 ಕಪ್
ನೂಡಲ್ಸ್ – 400 ಗ್ರಾಂ
ಮೂಳೆಗಳಿಲ್ಲದ ಬೇಯಿಸಿದ ಚಿಕನ್ – 250 ಗ್ರಾಂ
ಸಿಪ್ಪೆ ಸುಲಿದು ಅರ್ಧಕ್ಕೆ ಹೆಚ್ಚಿಕೊಂಡ ಈರುಳ್ಳಿ – 1
ಸೆಲರಿ – 2 ಕಾಂಡಗಳು
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನಪುಡಿ
ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ಚಿಕನ್ ಸ್ಟಾಕ್ ಹಾಕಿ, ಅದಕ್ಕೆ ಈರುಳ್ಳಿ ಮತ್ತು ಸೆಲರಿ ಸೇರಿಸಿ ಹೆಚ್ಚಿನ ಉರಿಯಲ್ಲಿ ಕುದಿಸಿ.
ಚಿಕನ್ ಅನ್ನು ಚೂರುಗಳಾಗಿ ಕತ್ತರಿಸಿ, ಚಿಕನ್ ಸ್ಟಾಕ್ ಕುದಿ ಬಂದ ಬಳಿಕ ಅದಕ್ಕೆ ಸೇರಿಸಿ.
ಬಳಿಕ ನೂಡಲ್ಸ್ ಅನ್ನು ಸೇರಿಸಿ 8 ನಿಮಿಷ ಬೇಯಿಸಿಕೊಳ್ಳಿ.
ಈಗ ಒಂದು ಸ್ಪೂನ್ ಸಹಾಯದಿಂದ ಈರುಳ್ಳಿ ಹಾಗೂ ಸೆಲರಿಯನ್ನು ತೆಗೆದು ಹಾಕಿ.
ಉಪ್ಪು ಹಾಗೂ ಮೆಣಸಿನಪುಡಿಯನ್ನು ಸೇರಿಸಿ, ಮಿಶ್ರಣ ಮಾಡಿ 1-2 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.
ಇದೀಗ ಚಿಕನ್ ನೂಡಲ್ ಸೂಪ್ ತಯಾರಾಗಿದ್ದು, ಬೌಲ್‌ಗಳಲ್ಲಿ ಬಡಿಸಿ, ಬಿಸಿಬಿಸಿಯಾಗಿ ಸವಿಯಿರಿ