ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರ ಬೇಡಿಕೆ ಮೇರೆಗೆ ಇನ್ಮುಂದೆ ನೈಸ್ ರಸ್ತೆಯಲ್ಲೂ ಬಿಎಂಟಿಸಿ ಬಸ್ ಸೇವೆ ಸಿಗಲಿದೆ. ನಗರದ ಮುಖ್ಯ ರಸ್ತೆಗಳಲ್ಲಿ ಮಾತ್ರ ಓಡಾಡುತ್ತಿದ್ದ ನಗರ ಸಾರಿಗೆ ಬಸ್‌ಗಳು ಇದೀಗ ನೈಸ್ ರಸ್ತೆಯಲ್ಲೂ ತಮ್ಮ ಸೇವೆ ಪ್ರಾರಂಭಿಸಲಿವೆ.
ಶೀಘ್ರದಲ್ಲೇ ಎಲೆಕ್ಟ್ರಾನಿಕ್ ಸಿಟಿಯಿಂದ ಮಾದವಾರಕ್ಕೆ ಹೊಸ ಮಾರ್ಗವಾಗಿ ಬಿಎಂಟಿಸಿ ಬಸ್ ಸೇವೆ ಸಿಗಲಿದೆ. ಈ ಎರಡು ಪ್ರದೇಶಗಳಿಗೆ ನೈಸ್ ರಸ್ತೆ ಮೂಲಕವಾಗಿ ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸಲಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಈ ಭಾಗಕ್ಕೆ ಈಗಾಗಲೇ ಮೆಟ್ರೋ ಸೇವೆ ಲಭ್ಯವಿದ್ದು, ಐಟಿಬಿಟಿ ಉದ್ಯೋಗಿಗಳಿಗೆ ನೆರವಾಗಿದೆ. ಇದೀಗ ನೈಸ್ ರಸ್ತೆಯ ಮೂಲಕ ಬಿಎಂಟಿಸಿ ಸಂಚಾರ ಇರುವುದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಉದ್ಯೋಗಿಗಳಿಗೂ ಸಹಾಯವಾಗಲಿದೆ.