ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರಿನ ಕಿಚ್ಚು ದಿನೇ ದಿನೇ ಹೆಚ್ಚುತ್ತಿದ್ದು, ಮಂಗಳವಾರ ಕರೆದಿದ್ದ ಬೆಂಗಳೂರು ಬಂದ್’ಗೆ ಬಿಎಂಟಿಸಿ ಹಾಗೂ ಕೆಎಸ್‌ಆರ್’ಟಿಸಿ ಬೆಂಬಲ ವ್ಯಕ್ತಪಡಿಸಿವೆ.
ಈಗಾಗಲೇ ಬೆಂಗಳೂರು ಬಂದ್’ಗೆ 100ಕ್ಕೂ ಹೆಚ್ಚು ಸಂಘಗಳು, ಓಲಾ, ಉಬರ್ ಚಾಲಕರು ಹಾಗೂ ಮಾಲೀಕರ ಸಂಘಗಳು ಬೆಂಬಲ ಸೂಚಿಸಿದ್ದು, ಇದೀಗ ಕೆಎಸ್‌ಆರ್’ಟಿಸಿ ಹಾಗೂ ಬಿಎಂಟಿಸಿ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ನಗರ ಮಂಗಳವಾರ ಬಹುತೇಕ ಸ್ಥಬ್ಧಗೊಳ್ಳುವ ಸಾಧ್ಯತೆಗಳಿವೆ.
ಕೆಎಸ್ಆರ್ಟಿಸಿ ಸ್ಟಾಫ್ ಆಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಅನಂತ್ ಸುಬ್ಬರಾವ್ ಅವರು ಮಾತನಾಡಿ, ಬೆಂಗಳೂರು ಬಂದ್ಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತೆ. ಸಾರಿಗೆ ಬಸ್ ರಸ್ತೆಗೆ ಇಳಿಯುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಶಾಲಾ ಆಡಳಿತ ಮಂಡಳಿ ಕೂಡ ನೈತಿಕ ಬೆಂಬಲ ಘೋಷಿಸಿದ್ದು, ರಜೆ ಘೋಷಿಸುವ ವಿಚಾರವನ್ನು ಆಯಾ ಶಾಲೆಗಳ ಆಡಳಿತ ಮಂಡಳಿಗೆ ಬಿಟ್ಟಿದೆ. ಬಂದ್ಗೆ ಖಾಸಗಿ ಸಾರಿಗೆ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ.