ಪ್ರಯಾಣ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿ ಪಾಸ್‌ಗಳ ದರ ಹೆಚ್ಚಳ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಪ್ರಯಾಣ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿ ಪಾಸ್‌ಗಳ ದರದಲ್ಲಿ ಏರಿಕೆಯಾಗಿದೆ.

ನಾಳೆಯಿಂದಲೇ ಬಿಎಂಟಿಸಿ ಪಾಸ್‌ಗಳ ದರ ಏರಿಕೆ ಆಗಲಿದೆ.

ಬಿಎಂಟಿಸಿ ಡೈಲಿ ಪಾಸ್ – 70 ರೂ. (ಹಳೆಯ ದರ), 80 ರೂ. (ಹೊಸ ದರ)
ಬಿಎಂಟಿಸಿ ವಾರದ ಪಾಸ್ – 300 ರೂ. (ಹಳೆಯ ದರ), 350 ರೂ. (ಹೊಸ ದರ)
ಹಿರಿಯ ನಾಗರಿಕರ ಮಾಸಿಕ ಪಾಸ್ – 945 ರೂ. (ಹಳೆಯ ದರ), 1,080 ರೂ. (ಹೊಸ ದರ)
ಸಾಮಾನ್ಯ ಮಾಸಿಕ ಪಾಸ್ – 1,050 ರೂ. (ಹಳೆಯ ದರ), 1,200 ರೂ. (ಹೊಸ ದರ)
ನೈಸ್ ರೋಡ್ ಮಾಸಿಕ ಪಾಸ್ – 2,200 ರೂ. (ಹಳೆಯ ದರ), 2,350 ರೂ. (ಹೊಸ ದರ)

ಒಪ್ಪಂದದ ಮೇಲೆ ಪಡೆಯುವ ಬಸ್‌ಗಳ ದರವನ್ನು ಸಾರಿಗೆ ಇಲಾಖೆ ಏರಿಕೆ ಮಾಡಿದೆ. ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸುವ ಬಸ್‌ಗಳ ಬಾಡಿಗೆ ಪರಿಷ್ಕರಣೆ ಮಾಡಲಾಗಿದೆ. ಈ ದರವನ್ನು ಕೆಎಸ್‌ಆರ್‌ಟಿಸಿ ಶೇ. 15ರಷ್ಟು ಹೆಚ್ಚಳ ಮಾಡಿದೆ.

ಪ್ರತಿ ಕಿಮೀ ದರದ ಮೇಲೆ ಬಾಡಿಗೆ ದರ ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ಸಾರಿಗೆ, ಅಶ್ವಮೇಧ, ಮಿಡಿ ಬಸ್, ಪಲಕ್ಕಿ ಸೇರಿದಂತೆ 16 ಬಗೆಯ ಬಸ್‌ಗಳ ಬಾಡಿಗೆ ದರ ಏರಿಕೆಯಾಗಿದೆ. ಐರಾವತ, ಅಂಬಾರಿ ಸೇರಿದಂತೆ ಮತ್ತಿತರ ಎಸಿ ಬಸ್‌ಗಳಿಗೆ ಜಿಎಸ್‌ಟಿ ಸೇರಿದಂತೆ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ನೂತನ ದರವು ಇಂದಿನಿAದ ಅನ್ವಯವಾಗಲಿದೆ.

ಈಗಾಗಲೇ ಬುಕ್ಕಿಂಗ್ ಮಾಡಲಾಗಿರುವ ಒಪ್ಪಂದದ ವಾಹನಗಳಿಗೆ ಹಳೆಯ ದರವನ್ನೇ ವಿಧಿಸುವಂತೆ ಕೆಎಸ್‌ಆರ್‌ಟಿಸಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!