ಗಣರಾಜ್ಯೋತ್ಸವದಂದು ಬಿಎಂಟಿಸಿಯ ‘ನಿಮ್ ಬಸ್’ app ಪ್ರಾರಂಭ, ಬಸ್ ಎಲ್ಲಿದೆ ಅಂತ ನೀವೇ ತಿಳ್ಕೊಳ್ಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸೋರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ನಿಮ್ಮ ಬಸ್ ಹೋಯ್ತಾ? ಎಲ್ಲಿದೆ, ಎಷ್ಟೊತ್ತಿಗೆ ನಿಮ್ಮ ಸ್ಟಾಪ್‌ಗೆ ಬರುತ್ತದೆ? ಎಲ್ಲದರ ಬಗೆಗಿನ ಮಾಹಿತಿಯನ್ನು ಮೊಬೈಲ್‌ನಲ್ಲಿಯೇ ಪಡೆಯಬಹುದಾಗಿದೆ.

ಇದಕ್ಕಾಗಿ ಸರ್ಕಾರ ನಿಮ್ ಬಸ್ ಆಪ್‌ನ್ನು ಗಣರಾಜ್ಯೋತ್ಸವ ದಿನದಂದು ಪ್ರಾರಂಭಿಸಲಿದೆ. ಡಿಸೆಂಬರ್ ೨೩ರಂದು ಆಪ್ ಬಿಡುಗಡೆಗೆ ಸರ್ಕಾರ ನಿರ್ಧರಿಸಿತ್ತು. ರಸ್ತೆ ಸಾರಿಗೆ ನಿಗಮವು ಕೆಲವು ತಾಂತ್ರಿಕ ದೋಷಗಳನ್ನು ಸರಿಪಡಿಸಲು ನಿರ್ಧರಿಸಿ, ಯೋಜನೆಯನ್ನು ಮುಂದೂಡಿತ್ತು.

ನೈಜ ಸಮಯದಲ್ಲಿ ಬಸ್‌ಗಳನ್ನು ಟ್ರ್ಯಾಕ್ ಮಾಡಲು ಆಪ್ ಸಹಾಯ ಮಾಡುತ್ತದೆ. ತೊಂದರೆಮುಕ್ತ ಪ್ರಯಾಣ ನಿಮ್ಮದಾಗುತ್ತದೆ. ಇತರ ಮಾಹಿತಿಗಳಾದ ಬಸ್ ದರ, ಮಾರ್ಗ ಹಾಗೂ ವೇಳಾಪಟ್ಟಿಗಳು ಲಭ್ಯವಾಗಲಿವೆ, ಮೊದಲು ಆಪ್ ಬಳಸಿ ಜನರ ಅಭಿಪ್ರಾಯ ಪಡೆದು ಆಪ್‌ನ್ನು ಸುಧಾರಣೆ ಮಾಡಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!