Wednesday, October 5, 2022

Latest Posts

ಗಂಗಾ ನದಿಯಲ್ಲಿ ದೋಣಿ ಮಗುಚಿ ದುರಂತ, ಮೃತರ ಸಂಖ್ಯೆ 7ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉತ್ತರ ಪ್ರದೇಶದ ಈ ಜಿಲ್ಲೆಯಲ್ಲಿ ಜನರನ್ನು ಸಾಗಿಸುತ್ತಿದ್ದ ದೋಣಿ ಗಂಗಾ ನದಿಯಲ್ಲಿ ಮುಳುಗಿದ ಘಟನೆ ನಡೆದಿದೆ, ರಕ್ಷಣಾ ತಂಡಗಳು ಗಂಗಾ ನದಿಯಿಂದ ಇನ್ನೂ ಐದು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ದೋಣಿ ದುರಂತದಲ್ಲಿ ಮುಳುಗಿ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ.
ಬುಧವಾರ ಸಂಜೆ ಈ ಘಟನೆ ನಡೆದಿದ್ದು, 24 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ರೆಯೋತಿಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನದಿಯಲ್ಲಿ ಮುಳುಗಿದೆ. ಜನರು ವಾರದ ಮಾರುಕಟ್ಟೆಯಿಂದ ಹಿಂತಿರುಗುತ್ತಿದ್ದರು.
“ಸ್ಥಳೀಯರ ಸಹಾಯದಿಂದ ಹದಿನೇಳು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರ ಶವಗಳನ್ನು ರೆಯೋತಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಡೆಯಲಾಗಿದೆ. ಸಂಧ್ಯಾ ಕುಮಾರ್ (6), ಅನಿತಾ ಪಾಸ್ವಾನ್ (10), ಅಲಿಸಾ ಯಾದವ್ (5), ಖುಶಾಲ್ ಯಾದವ್ (10) ಮತ್ತು ಸತ್ಯಂ (12) ಮೃತದೇಹಗಳನ್ನು ಗುರುವಾರ ನದಿಯಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಸಂಜೆ, ಮುಳುಗುಗಾರರು ನಗೀನಾ ಪಾಸ್ವಾನ್ (70) ಮತ್ತು ವಿಷಂಭರ್ ಗೌರ್ ಅವರ ಮೃತದೇಹಗಳನ್ನು ಹೊರತೆಗೆದಿದ್ದರು. ಮೃತರ ಸಂಬಂಧಿಕರಿಗೆ ವಿಪತ್ತು ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುವುದಾಗಿ ಗಾಜಿಪುರ ಜಿಲ್ಲಾಡಳಿತ ಭರವಸೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!