ಅರಬ್ಬಿ ಸಮುದ್ರಕ್ಕೆ ಇಳಿದಿದ್ದ 27 ಮೀನುಗಾರರಿದ್ದ ಬೋಟ್ ನಾಪತ್ತೆ: ಎಲ್ಲೆಡೆ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹವಾಮಾನ ವೈಪರೀತ್ಯದಿಂದಾಗಿ ಅರಬ್ಬಿ ಸಮುದ್ರದಲ್ಲಿ ೨೭ ಮೀನುಗಾರರಿದ್ದ ಬೋಟ್ ಕಾಣೆಯಾಗಿದೆ.

ಗೋವಾ ಮೂಲದ ಬೋಟ್ ಇದಾಗಿದ್ದು, ನ.29ರಂದು ಗೋವಾದ ಪಣಜಿಯಿಂದ ಹೊರಟಿದ್ದರು. ಅಂಕೋಲ ತಾಲೂಕಿನ ಬೆಲೆಕೇರಿ ಸಮುದ್ರ ಭಾಗದಲ್ಲಿ ಬೋಟ್‌ನ ಲೊಕೇಶನ್ ಕಡೆಯದಾಗಿ ಪತ್ತೆಯಾಗಿತ್ತು.

ಇಂಜಿನ್‌ನಲ್ಲಿ ಸಮಸ್ಯೆಯಾಗಿ ಬೋಟ್ ಸಮುದ್ರ ಮಧ್ಯದಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಮೀನುಗಾರರಿಗಾಗಿ ಶೋಧ ಆರಂಭವಾಗಿದ್ದು, ಕೋಸ್ಟ್‌ಗಾರ್ಡ್ ಸಿಬ್ಬಂದಿ ಶ್ರಮವಹಿಸಿ ಹುಡುಕಾಟ ನಡೆಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!