ಹೊಸದಿಗಂತ ಡಿಜಿಟಲ್ ಡೆಸ್ಕ್:
ದ್ವೀಪ ರಾಷ್ಟ್ರ ಲಂಕೆ ಹಾಗೂ ಭಾರತದ ನಡುವೆ ಪ್ರಯಾಣಿಕರ ದೋಣಿ ಸೇವೆ ಶನಿವಾರ ಆರಂಭಗೊಂಡಿದೆ.
ಭಾರತದ ನಾಗಪಟ್ಟಣಂನಿಂದ ಶ್ರೀಲಂಕಾದ ಕಂಕೆಸಂತುರೈಗೆ ಈ ದೋಣಿ ಸೇವೆ ಆರಂಭವಾಗಿದೆ.
ಈ ಬಗ್ಗೆ ಖುಷಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಕವಿ ಸುಬ್ರಮಣ್ಯ ಭಾರತಿಯ ಸಿಂಧು ನದಿಯ ಮಿಸಾಯಿ ಕವಿತೆಯನ್ನು ಉಲ್ಲೇಖಿಸಿದ್ದು, ಮಹಾ ಕವಿ ಸುಬ್ರಮಣ್ಯ ಭಾರತಿ , ತಮ್ಮ ಸಿಂಧು ನದಿಯ ಮಿಸಾಯಿ ಹಾಡಿನಲ್ಲಿ ಭಾರತ ಮತ್ತು ಶ್ರೀಲಂಕಾವನ್ನು ಸಂಪರ್ಕಿಸುವ ಸೇತುವೆಯ ಬಗ್ಗೆ ಮಾತನಾಡಿದ್ದಾರೆ. ಈ ದೋಣಿ ಸೇವೆ ಎಲ್ಲಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಮತ್ತೆ ಜೀವಂತವಾಗಿಸುತ್ತದೆ ಎಂದಿದ್ದಾರೆ.
ದೋಣಿ ಸೇವೆ ಪ್ರಾರಂಭವಾಗಿರುವುದು ನಮ್ಮ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲು. ಉಭಯ ದೇಶಗಳ ನಡುವೆ ಸಂಪರ್ಕ ಹಾಗೂ ವ್ಯಾಪಾರಕ್ಕೆ ಇದರಿಂದ ಅನುಕೂಲವಾಗಲಿದ್ದು, ರಾಷ್ಟ್ರಗಳ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.