ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಬೈಂದೂರಿನ ಉಪ್ಪುಂದ ಕರ್ಕಿಕಳಿ ಎಂಬಲ್ಲಿ ಸಾಂಪ್ರದಾಯಿಕ ಪಟ್ಟೆಬಲೆ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಸಮುದ್ರದಲ್ಲಿ ನಾಪತ್ತೆಯಾದ ಘಟನೆ ಸೋಮವಾರ ಸಂಜೆ ನಡೆದಿದೆ.
ಸಚಿನ್ ಎನ್ನುವರ ಮಾಲಕತ್ವದ ಮರ್ಲು ಚಿಕ್ಕು ಹೆಸರಿನ ದೋಣಿ ಮುಳುಗಡೆಯಾಗಿದೆ.
ಸದ್ಯ ನಾಪತ್ತೆಯಾದ ಮೀನುಗಾರನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ದೋಣಿಯಲ್ಲಿ 6 ಜನರು ಮೀನುಗಾರಿಕೆಗೆ ತೆರಳಿದ್ದು, ಅದ್ರಲ್ಲಿ ನಾಲ್ವರು ಈಜಿ ದಡ ಸೇರಿದ್ದಾರೆ. ಮೃತ ದುರ್ದೈವಿಗಳು ನಾಗೇಶ್ (30), ಸತೀಶ್ (29) ನೀರು ಪಾಲು ಎಂದು ಗುರುತಿಸಲಾಗಿದೆ.
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.