‘ಬೋಯಿಂಗ್ ಸುಕನ್ಯಾ ಯೋಜನೆ’ ನನಸಾಗಲಿದೆ ಪೈಲಟ್ ಆಗುವ ಹೆಣ್ಣುಮಕ್ಕಳ ಕನಸು: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೋಯಿಂಗ್ ಸುಕನ್ಯಾ ಯೋಜನೆ(Boeing Sukanya Programme) ಮೂಲಕ ವೈಮಾನಿಕ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ಅವಕಾಶ ಸಿಗಲಿದೆ. ಪೈಲಟ್ ಆಗುವ ಹೆಣ್ಣುಮಕ್ಕಳ ಕನಸು ನನಸಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬೋಯಿಂಗ್ ಸುಕನ್ಯಾ ಯೋಜನೆ ಲೋಕಾರ್ಪಣೆ ಮಾಡಿದ ಬಳಿಕ ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಜಾಗತಿಕ ಅಗತ್ಯಗಳನ್ನು ಪೂರೈಸುವ ನಗರ ಬೆಂಗಳೂರು ಆಗಿದೆ. ಈ ಬಿಐಇಟಿಸಿ ಕೇಂದ್ರ ವೈಮಾನಿಕ ಕ್ಷೇತ್ರಕ್ಕೆ ದೊಡ್ಡ ಬಲ ಕೊಡಲಿದೆ. ಈ ಕೇಂದ್ರ ಭಾರತದ ಮೇಲೆ ವಿಶ್ವದ ಭರವಸೆ ಇನ್ನಷ್ಟು ಗಟ್ಟಿ ಮಾಡಲಿದೆ ಎಂದರು.

ಕರ್ನಾಟಕದ ಜನತೆಗೂ ಇವತ್ತು ಮಹತ್ತರ ದಿನ. ಕಳೆದ ಕೆಲ ತಿಂಗಳ ಹಿಂದೆ ಕರ್ನಾಟಕದಲ್ಲಿ ಹೆಲಿಕಾಪ್ಟರ್ ತಯಾರಿಕಾ ಘಟಕ ಉದ್ಘಾಟಿಸಲಾಯ್ತು. ಕರ್ನಾಟಕ ಜಾಗತಿಕ ರಂಗದಲ್ಲಿ ಹೆಚ್ಚು ಹೆಚ್ಚು ವಿಕಸಿತ ಆಗ್ತಿದೆ. ವೈಮಾನಿಕ ರಂಗದಲ್ಲಿ ಹೊಸ ಕೌಶಲ್ಯ ಕಲಿಯಲು ಹೆಚ್ಚು ಅವಕಾಶಗಳು ಸಿಕ್ತಿವೆ. ವೈಮಾನಿಕ ರಂಗದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಸಿಗತೊಡಗಿವೆ ಎಂದು ಹೇಳಿದರು. ಇ

ಇಂದು ಭಾರತ ಮಹಿಳಾ ಪೈಲಟ್ ಗಳ ವಿಚಾರದಲ್ಲಿ ಮುಂಚೂಣಿಯಲ್ಲಿದೆ. 15% ಮಹಿಳಾ ಪೈಲಟ್ ಗಳು ದೇಶದಲ್ಲಿದ್ದಾರೆ. ಜಾಗತಿಕ ಪ್ರಮಾಣಕ್ಕಿಂತ ಇದು ಮೂರು ಪಟ್ಟು ಹೆಚ್ಚು ಆಗಿದೆ. ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಮೂಲಕ ವೈಮಾನಿಕ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ಅವಕಾಶ ಸಿಗಲಿದೆ. ಪೈಲಟ್ ಆಗುವ ಹೆಣ್ಣುಮಕ್ಕಳ ಕನಸು ನನಸಾಗಲಿದೆ. ಚಂದ್ರಯಾನ ಮೂಲಕ ಯಾವ ದೇಶವೂ ಮಾಡದ ಸಾಧನೆ ಮಾಡಿದ್ದೇವೆ. ನಮ್ಮ ಸ್ಥಾನ ವಿಶ್ವದಲ್ಲಿ ಇನ್ನೂ ಮೇಲಿನ ಸ್ತರಕ್ಕೆ ಈ ಮೂಲಕ ಹೋಗಿದೆ ಎಂದು ಮೋದಿ ತಿಳಿಸಿದರು.

ಭಾರತ ವೈಮಾನಿಕ ರಂಗದಲ್ಲಿ ಹತ್ತು ವರ್ಷದ ಹಿಂದೆ ಹೇಗಿತ್ತು?. ಕೇವಲ ಹತ್ತೇ ವರ್ಷಗಳಲ್ಲಿ ವೈಮಾನಿಕ ರಂಗದಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿದೆ. ವೈಮಾನಿಕ ಸೇವೆಗಳು ಜನರಿಗೆ ಸುಲಭವಾಗಿ ಈಗ ಕೈಗೆಟುಕುತ್ತಿವೆ. 70 ವಿಮಾನ ನಿಲ್ದಾಣಗಳು ಈ ಹಿಂದೆ ಇದ್ವು, ಈಗ 150 ಇವೆ. ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಅಷ್ಟೇ ಅಲ್ಲ ಅವುಗಳ ಕಾರ್ಯಕ್ಷಮತೆ, ಗುಣಮಟ್ಟವೂ ಹೆಚ್ಚಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!