ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಶಾನ್ಯ ನೈಜೀರಿಯಾದಲ್ಲಿ ಬೊಕೊ ಹರಾಮ್ ಇಸ್ಲಾಮಿಕ್ ಉಗ್ರಗಾಮಿಗಳು ಮಾರುಕಟ್ಟೆ, ಮನೆಗಳ ಮೇಲೆ ಗುಂಡು ಹಾರಿಸಿದ್ದು, ಕನಿಷ್ಠ 100 ಗ್ರಾಮಸ್ಥರು ಸಾವನ್ನಪ್ಪಿದ್ದಾರೆ .
ಯೋಬೆ ಪೊಲೀಸ್ ವಕ್ತಾರ ಡುಂಗಸ್ ಅಬ್ದುಲ್ಕರೀಮ್ ಪ್ರಕಾರ, 50 ಕ್ಕೂ ಹೆಚ್ಚು ಉಗ್ರಗಾಮಿಗಳು ಮೋಟಾರ್ ಸೈಕಲ್‌ಗಳಲ್ಲಿ ಭಾನುವಾರ ಸಂಜೆ ಯೋಬೆ ರಾಜ್ಯದ ತರ್ಮುವಾ ಕೌನ್ಸಿಲ್ ಪ್ರದೇಶಕ್ಕೆ ನುಗ್ಗಿ ಕಟ್ಟಡಗಳಿಗೆ ಬೆಂಕಿ ಹಚ್ಚುವ ಮೊದಲು ಗುಂಡಿನ ದಾಳಿ ನಡೆಸಿದರು.
2009 ರಿಂದ ಈ ಪ್ರದೇಶದಲ್ಲಿ ಇಸ್ಲಾಮಿಕ್ ಕಾನೂನು ಅಥವಾ ಷರಿಯಾ ಸ್ಥಾಪಿಸಲು ದಂಗೆಯನ್ನು ಪ್ರಾರಂಭಿಸಿರುವ ಬೊಕೊ ಹರಾಮ್ ಉಗ್ರಗಾಮಿಗಳು ಈ ದಾಳಿ ನಡೆಸಿದ್ದಾರೆ. ಬೊಕೊ ಹರಾಮ್ ಅಂದಿನಿಂದ ವಿವಿಧ ಬಣಗಳಾಗಿ ವಿಭಜಿಸಲ್ಪಟ್ಟಿದೆ, ಒಟ್ಟಿಗೆ ಕನಿಷ್ಠ 35,000 ಜನರ ನೇರ ಸಾವುಗಳು ಮತ್ತು 2 ಮಿಲಿಯನ್‌ಗಿಂತಲೂ ಹೆಚ್ಚು ಸ್ಥಳಾಂತರ ಆಗಿದೆ. ಲಕ್ಷಾಂತರ ಜನ ಬಿಕ್ಕಟ್ಟು ಎದುರಿಸುತ್ತಿದ್ದಾರೆ.
ಡೆಪ್ಯುಟಿ ಗವರ್ನರ್ ಉಲ್ಲೇಖಿಸಿದ 34 ಸತ್ತವರನ್ನು ಒಂದೇ ಗ್ರಾಮದಲ್ಲಿ ಸಮಾಧಿ ಮಾಡಲಾಗಿದೆ. ಇದುವರೆಗೆ 102 ಗ್ರಾಮಸ್ಥರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಭಾನುವಾರದ ದಾಳಿಯು ಯೋಬೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ ಎಂದು ಸಮುದಾಯದ ನಾಯಕ ಜನ್ನಾ ಉಮರ್ ಹೇಳಿದ್ದಾರೆ.