ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಲ್ ಜಾಹೀರಾತು ನೋಡಿರುತ್ತೀರಿ ಅದ್ರಲ್ಲಿ ಬಾಲಿವುಡ್ ನಟರಾದ ಶಾರುಖ್ ಖಾನ್ ,ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ನಟಿಸಿದ್ದಾರೆ.
ಆದ್ರೆ ಇಡಿಧ ಮಸಾಲಾ ಬ್ರಾಂಡ್‌ನೊಂದಿಗೆ ಸೂಪರ್‌ಸ್ಟಾರ್ ಅಕ್ಷಯ್ ಕುಮಾ ಒಪ್ಪಂದ ಕೊನೆಗೊಂಡಿದ್ದು, ಇದನ್ನು ಮುಂದುವರಿಸದಿರಲು ನಿರ್ಧರಿಸಿದ್ದಾರೆ.
ಪಾನ್ ಮಸಾಲಾ ಬ್ರ್ಯಾಂಡ್ ವಿಮಲ್ ಅನ್ನು ಬೆಂಬಲಿಸಿದ ನಂತರ, ಅಕ್ಷಯ್ ಕುಮಾರ್ ಕಳೆದ ವರ್ಷ (2022) ಜನರಲ್ಲಿ ಕ್ಷಮೆಯಾಚಿಸಿದರು. ಆದರೂ ಅವರು ನಿರಂತರವಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಕಂಪನಿಯೊಂದಿಗಿನ ಅಕ್ಷಯ್ ಒಪ್ಪಂದ ಕೊನೆಗೊಂಡಿದೆ.
ಏಪ್ರಿಲ್ 2022 ರಲ್ಲಿ, ಅಕ್ಷಯ್ ಅವರ ವಿಮಲ್ ಎಲೈಚಿ ಜಾಹೀರಾತು ಪ್ರಸಾರವಾದ ನಂತರ ಅಭೀಮಾನಿಗಳಿಂದ ಟೀಕೆಗೆ ಗುರಿಯಾಗಿದ್ದರು ಮತ್ತು ನಂತರ ಅವರ ಅಭಿಮಾನಿಗಳಿಗೆ ಕ್ಷಮೆಯಾಚಿಸಿದರು. ಇದರ ನಂತರ ಅಕ್ಷಯ್ ಬ್ರ್ಯಾಂಡ್‌ನೊಂದಿಗಿನ ಒಪ್ಪಂದ ಕೊನೆಗೊಳಿಸಲು ನಿರ್ಧರಿಸಿದ್ದರು. ಈಗ ಅಂತಿಮವಾಗಿ, ನಟ ಮಸಾಲಾ ಬ್ರಾಂಡ್‌ನ ಜಾಹೀರಾತುಗಳಲ್ಲಿ ಕಾಣಿಸುವುದಿಲ್ಲ, ವಿಮಲ್ ಅವರೊಂದಿಗಿನ ಒಪ್ಪಂದ ಕೊನೆಗೊಂಡಿದೆ.
‘ನನ್ನನ್ನು ಕ್ಷಮಿಸಿ. ನನ್ನ ಎಲ್ಲಾ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಲ್ಲಿ ನಿಮ್ಮ ಪ್ರತಿಕ್ರಿಯೆ ನನ್ನ ಮೇಲೆ ಆಳವಾಗಿ ಪರಿಣಾಮ ಬೀರಿದೆ. ನಾನು ಇನ್ನು ಮುಂದೆ ತಂಬಾಕು ಉತ್ಪನ್ನಗಳನ್ನು ಬೆಂಬಲಿಸುವುದಿಲ್ಲ. ವಿಮಲ್ ಎಲೈಚಿ ಅವರೊಂದಿಗಿನ ನನ್ನ ಒಪ್ಪಂದದ ದೃಷ್ಟಿಯಿಂದ ನಾನು ನಿಮ್ಮ ಭಾವನೆಗಳನ್ನು ಗೌರವಿಸುತ್ತೇನೆ ಎಂದು ಅಕ್ಷಯ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
‘ಎಲ್ಲ ನಮ್ರತೆಯಿಂದ ಈ ಜಾಹೀರಾತನ್ನು ಬಿಟ್ಟಿದ್ದೇನೆ.ಇದರಿಂದ ದುಡಿದ ಹಣವನ್ನು ಸಮಾಜದ ಕೆಲಸಕ್ಕೆ ಬಳಸಲು ನಿರ್ಧರಿಸಿದ್ದೇನೆ. ಬ್ರ್ಯಾಂಡ್ ಒಪ್ಪಂದದ ಅವಧಿಯವರೆಗೆ ಜಾಹೀರಾತು ತೋರಿಸಬಹುದು. ಅದು ನನ್ನ ನಿಯಂತ್ರಣದಲ್ಲಿಲ್ಲ, ಆದರೆ ನಾನು ಮುಂದೆ ಹೋಗುತ್ತಿರುವುದು ತುಂಬಾ ಸಂತೋಷವಾಗಿದೆ. ನಾನು ಎಚ್ಚರವಾಗಿರಲು ಭರವಸೆ ನೀಡುತ್ತೇನೆ. ಪ್ರತಿಯಾಗಿ, ನಾನು ಯಾವಾಗಲೂ ನಿಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳನ್ನು ಬಯಸುತ್ತೇನೆ’ ಎಂದು ಬರೆದಿದ್ದರು.