ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕೇಸರಿ 2’ ಸಿನಿಮಾದ ಪೋಸ್ಟರ್ ವೈರಲ್ ಆಗಿದ್ದು, ಅದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಥಕ್ಕಳಿ ವೇಷದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ. .
ಕಥಕ್ಕಳಿ ಲುಕ್‌ನಲ್ಲಿರುವ ಫೋಟೋ ಶೇರ್ ಮಾಡಿ ಇದು ಕೇವಲ ಕಾಸ್ಟ್ಯೂಮ್ ಅಲ್ಲ, ನಮ್ಮ ದೇಶದ ಸಂಪ್ರದಾಯದ ಪ್ರತೀಕ ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ.
‘ಕೇಸರಿ 2’ ಚಿತ್ರದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಚಿತ್ರೀಕರಿಸಿದ್ದಾರೆ. ಇದಕ್ಕಾಗಿ ಸಿ. ಶಂಕರನ್ ನಾಯರ್ ನೇತೃತ್ವದಲ್ಲಿ ನ್ಯಾಯಕ್ಕಾಗಿ ನಡೆದ ಹೋರಾಟದ ಅಸಲಿ ಕಥೆಯನ್ನೇ ಈ ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರೆ. ಇದೇ ಏ.18ರಂದು ಸಿನಿಮಾ ರಿಲೀಸ್ ಆಗಲಿದೆ.