ಬಾಲಿವುಡ್‌ ನಟ ಅನಿಲ್‌ ಕಪೂರ್‌ ತಾಯಿ ನಿರ್ಮಲ್‌ ಕಪೂರ್‌ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬಾಲಿವುಡ್‌ ನಟ ಅನಿಲ್‌ ಕಪೂರ್‌ ಹಾಗೂ ಬೋನಿ ಕಪೂರ್ ಮತ್ತು ನಟ ಸಂಜಯ್ ಕಪೂರ್ ಅವರ ತಾಯಿ ನಿರ್ಮಲ್ ಕಪೂರ್ ಅವರು ಮೇ 2 ರಂದು ವಯೋಸಹಜ ಸಮಸ್ಯೆಗಳಿಂದ ನಿಧನರಾಗಿದ್ದಾರೆ.

ಕಳೆದ ಎರಡು ತಿಂಗಳುಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಿಧನದ ನಂತರ ಆಸ್ಪತ್ರೆ ಬಳಿ ಬೋನಿ ಕಪೂರ್, ಶನಯಾ ಕಪೂರ್, ರಿಯಾ ಕಪೂರ್ ಅವರ ಪತಿ ಕರಣ್ ಬೂಲಾನಿ, ಜಾನ್ವಿ ಕಪೂರ್ ಮತ್ತು ಶಿಖರ್ ಪಹರಿಯಾ ಸೇರಿದಂತೆ ಹಲವರು ಆಗಮಿಸಿದ್ದರು. ಕಳೆದ ಸಪ್ಟೆಂಬರ್‌ನಲ್ಲಿ ಅವರು ತಮ್ಮ 90 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು.

ನಿರ್ಮಲ್ ಕಪೂರ್ ಪ್ರಸಿದ್ಧ ನಿರ್ಮಾಪಕ ಸುರಿಂದರ್ ಕಪೂರ್ ಪತ್ನಿ. ಬೋನಿ ಕಪೂರ್‌, ಅನಿಲ್‌ ಕಪೂರ್‌ ಸೇರಿದಂತೆ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಅರ್ಜುನ್ ಕಪೂರ್, ಸೋನಮ್ ಕಪೂರ್, ರಿಯಾ ಕಪೂರ್, ಹರ್ಷವರ್ಧನ್ ಕಪೂರ್, ಜಾನ್ವಿ ಕಪೂರ್, ಅನ್ಶುಲಾ ಕಪೂರ್, ಖುಷಿ ಕಪೂರ್ ಮತ್ತು ಮೋಹಿತ್ ಮಾರ್ವಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳ ಅಜ್ಜಿ ಇವರು.

ಅವರು ಹಮ್ ಪಾಂಚ್, ವೋ ಸಾತ್ ದಿನ್, ಲೋಫರ್, ಜುದಾಯಿ ಮತ್ತು ಹಮಾರಾ ದಿಲ್ ಆಪ್ಕೆ ಪಾಸ್ ಹೈ ಮುಂತಾದ ಚಿತ್ರಗಳಿಗೆ ಸಹ ನಿರ್ಮಾಪಕಿಯಾಗಿದ್ದರು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!