ಬಾಲಿವುಡ್​ ನಟ ಸಲ್ಮಾನ್​ ಖಾನ್ ​ಆಪ್ತನ ಮೇಲೆ ರಾಡ್​ನಿಂದ ಹಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ ನಟ ಸಲ್ಮಾನ್​ ಖಾನ್ ​ ಅವರ ಪ್ರೊಡಕ್ಷನ್​ ಹೌಸ್​ನಲ್ಲಿ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿರುವ ಪಾಲೇಶ್ವರ್ ಚೌಹಾಣ್ ಅವರ ಮೇಲೆ ರಾಡ್​ನಲ್ಲಿ ಹಲ್ಲೆ ನಡೆದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ‘

ಈಗಾಗಲೇ ನಟ ಸಲ್ಮಾನ್​ ಖಾನ್ ಗೆ ಹಲವಾರು ಬಾರಿ ಕೊಲೆ ಬೆದರಿಕೆ ಬರುತ್ತಲೇ ಇದೆ. ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ ನಟ ಸಲ್ಮಾನ್ ಖಾನ್ (Salman Khan) ಅವರನ್ನು ಕೊಲ್ಲುವುದಾಗಿ ಇದಾಗಲೇ ಹಲವಾರು ಬಾರಿ ಬೆದರಿಕೆ ಹಾಕಿದ್ದಾನೆ. ಇದರ ಬೆನ್ನಲ್ಲೇ ಇದೀಗ ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಮನೆಯ ಮೇಲೆ ಗುಂಡಿನ ದಾಳಿ ನಡೆದಿತ್ತು.

ಇದೀಗ ಪ್ರೊಡಕ್ಷನ್​ ಹೌಸ್​ನಲ್ಲಿ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿರುವ ಪಾಲೇಶ್ವರ್ ಚೌಹಾಣ್ ಅವರ ಮೇಲೆ ರಾಡ್​ನಲ್ಲಿ ಹಲ್ಲೆ ನಡೆದಿದ್ದು,ಸಲ್ಲು ಭಾಯಿ ಫ್ಯಾನ್ಸ್​ ಸಕತ್​ ಆತಂಕಕ್ಕೆ ಒಳಗಾಗಿದ್ದಾರೆ.

ಆದರೆ ಸಲ್ಮಾನ್​ ಖಾನ್​ ಕೊಲೆ ಬೆದರಿಕೆಗೂ, ಈ ಹಲ್ಲೆಗೂ ಸಂಬಂಧವಿಲ್ಲ ಎಂದು ಹೇಳಲಾಗುತ್ತಿದೆ. ಸಾಲದ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಪಾಲೇಶ್ವರ್ ಚೌಹಾಣ್ ಬಾರ್ ಮ್ಯಾನೇಜರ್‌ ಸತೀಶ್​ ಎನ್ನುವವರಿಗೆ ಸಾಲ ನೀಡಿದ್ದರು. ಅವರು ಪಾಲೇಶ್ವರ್​ಗೆ ಅರ್ಧ ಹಣವನ್ನು ಹಿಂದಿರುಗಿಸಿದ್ದರು. ಉಳಿದ ಹಣವನ್ನು ಹಿಂದಿರಿಗಿಸಿ ಎಂದು ಕೇಳಲು ಪಾಲೇಶ್ವರ್​ ಬಾರ್‌ಗೆ ತೆರಳಿದರು. ಆದರೆ ಮಧ್ಯರಾತ್ರಿಯವರೆಗೆ ಕಾದರೂ ಅವರು ಬರಲಿಲ್ಲ. ಮಧ್ಯರಾತ್ರಿ 1 ಗಂಟೆಗೆ ಸತೀಶ್ ಆಗಮಿಸಿದರು. ‘ಇದು ಬಾರ್ ಮುಚ್ಚುವ ಸಮಯ. ನಾಳೆ ಮಾತನಾಡೋಣ’ ಎಂದು ಹೇಳಿ ಹೊರಟೇ ಬಿಟ್ಟರು ಸತೀಶ್. ಇದು ಪಾಲೇಶ್ವರ್ ಕೋಪಕ್ಕೆ ಕಾರಣವಾಯಿತು. ಅವರು ಬಾರ್ ಹೊರಗೆ ಸತೀಶ್​ನ ಪ್ರಶ್ನೆ ಮಾಡಿದರು. ಈ ವೇಳೆ ಪಾಲೇಶ್ವರ್​ ಮೇಲೆ ಸತೀಶ್ ಹಾಗೂ ಅವರ ಸಹಚರರು ಹಲ್ಲೆ ಮಾಡಿದ್ದಾರೆ. ಪಾಲೇಶ್ವರ್ ಚೌಹಾಣ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಪಾಲೇಶ್ವರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!