ಸಂಸತ್ ನಲ್ಲಿ ವಿಪಕ್ಷಗಳ ಪ್ರತಿಭಟನೆ: ಲೋಕಸಭೆಯಿಂದ 14 ಸಂಸದರ ಅಮಾನತು!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಸಂಸತ್ ಮೇಲೆ ನಡೆದ ದಾಳಿ ಖಂಡಿಸಿ ವಿಪಕ್ಷಗಳು ಭಾರಿ ಪ್ರತಿಭಟನೆ ನೆಡೆಸಿದೆ. ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿ ಅಶಿಸ್ತು ತೋರಿದ 14 ಸಂಸದರನ್ನು ಸ್ಪೀಕರ್ ಅಮಾನತು ಮಾಡಿದ್ದಾರೆ.

ಲೋಕಸಭೆಯಲ್ಲಿ ನಡೆದ ಭಾರಿ ಭದ್ರತಾ ಲೋಪದ ಹೊಣೆಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಸಂಸದರು ಭಾರಿ ಗದ್ದಲ ನಡೆಸಿದ್ದಾರೆ. ಇದರ ಪರಿಣಾಮ 14 ಸಂಸದರನ್ನು ಅಮಾನತು ಮಾಡಿದ್ದಾರೆ.

ಪ್ರತಿಪಕ್ಷಗಳು ಸ್ಪೀಕರ್ ಎಚ್ಚರಿಕೆ ಲೆಕ್ಕಿಸದೆ ಪ್ರತಿಭಟನೆ ನಡೆಸಿದ್ದಾರೆ. ಸದನದಲ್ಲಿ ಅಶಿಸ್ತು ತೋರಿದ ಕಾರಣಕ್ಕೆ ಸ್ಪೀಕರ್ ಒಂ ಬಿರ್ಲಾ 14 ಸಂಸದರನ್ನು ಅಮಾನತು ಮಾಡಿದ್ದಾರೆ.

ಸಂಸದರಾದ ಟಿಎನ್ ಪ್ರತಾಪನ್, ಹಿಬಿ ಇಡನ್, ಎಸ್ ಜ್ಯೋತಿಮಣಿ, ರಮ್ಯಾ ಹರಿದಾಸ್, ಡೀನ್ ಕುರಿಯಾಕೋಸ್, ಬೆನ್ನಿ ಬೆಹನಾನ್, ವಿಕೆ ಶ್ರೀಕಂಠನ್, ಮೊಹಮ್ಮದ್ ಜಾವೇದ್, ಪಿಆರ್ ನಟರಾಜನ್, ಕನ್ನಿಮೊಳಿ ಕರುಣಾನಿಧಿ, ಕೆ ಸುಬ್ರಹ್ಮಮಣ್ಯಂ, ಎಸ್ ಆರ್ ಪ್ರತಿಭನ್, ಎಸ್ ವೆಂಕಟೇಶನ್ ಹಾಗೂ ಮಣಿಕಂ ಠಾಗೋರ್ ಅಮಾನತಾಗಿದ್ದಾರೆ.

ಸಂಪೂರ್ಣ ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಲಾಗಿದೆ.

ರಾಜ್ಯಸಭೆಯಲ್ಲಿ ಇಂದು ಬೆಳಗ್ಗೆ ಟಿಎಂಸಿ ಸಂಸದ ಡರೇಕ ಒಬ್ರಿಯಾನ್ ಅಮಾನತ್ತಾಗಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!