ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅದೇ ರೀತಿ ಅವರ ವಯಸ್ಸು ಕೂಡ ಹೆಚ್ಚುತ್ತಿದೆ. ಆದರೆ, ಅವರ ಲುಕ್ ಹೆಚ್ಚು ಗಮನ ಸೆಳೆಯುತ್ತದೆ.
ಈ ನಡುವೆ ಅವರು ಕಾರ್ಯಕ್ರಮ ಒಂದರಲ್ಲಿ ನನಗೆ ಈ ವರ್ಷ 60ಕ್ಕೆ ಕಾಲಿಡುತ್ತಿದ್ದೇನೆ. ಆದರೆ, ನಾನು 30ರ ರೀತಿ ಕಾಣುತ್ತಿದ್ದೇನೆ. ಆದರೆ, ಕೆಲವು ವಿಚಾರಗಳನ್ನು ಮರೆಯುತ್ತೇನೆ’ ಎಂದಿದ್ದಾರೆ ಶಾರುಖ್ ಖಾನ್. ಈ ಮೂಲಕ ಮರೆವಿನ ಕಾಯಿಲೆ ಆರಂಭ ಆಗಿದೆ ಎಂದಿದ್ದಾರೆ.
ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಪಠಾಣ್’ ಚಿತ್ರದ ‘ಜೂಮೆ ಜೋ ಪಠಾಣ್’ ಸಾಂಗ್ಗೆ ಶಾರುಖ್ ಖಾನ್ ಡ್ಯಾನ್ಸ್ ಮಾಡಿದ್ದಾರೆ. ‘ಜವಾನ್’ ಚಿತ್ರದ ‘ಜಿಂದಾ ಬಂದಾ’ ಹಾಡಿಗೂ ಸುದೀಪ್ ಡ್ಯಾನ್ಸ್ ಮಾಡಿದರು. ಅವರು ಸಿಗ್ನೇಚರ್ ಪೋಸ್ ಕೂಡ ಮಾಡಿದ್ದರು.
‘ನಾನು ಅದನ್ನು (ಕಿಂಗ್ ಚಿತ್ರವನ್ನು) ಶೂಟ್ ಮಾಡುತ್ತಿದ್ದೇನೆ. ಮುಂದಿನ ಕೆಲ ತಿಂಗಳು ಶೂಟ್ ಮಾಡುತ್ತೇನೆ. ನನ್ನ ನಿರ್ದೇಶಕ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಅವರು ಸ್ಟ್ರಿಕ್ಟ್. ಪಠಾಣ್ ಕೂಡ ಮಾಡಿದ್ದಾರೆ. ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ರಿವೀಲ್ ಮಾಡಬೇಡಿ ಎಂದು ಹೇಳಿದ್ದಾರೆ. ಈ ಸಿನಿಮಾ ಎಂಟರ್ಟೇನಿಂಗ್ ಆಗಿರಲಿದೆ. ನೀವು ಇಷ್ಟಪಡಲಿದ್ದೀರಿ’ ಎಂದು ಶಾರುಖ್ ಖಾನ್ ಅವರು ಹೇಳಿದ್ದಾರೆ.