SHOCKING | ಬಾಲಿವುಡ್ ನಟ ಆದಿತ್ಯಾ ಪಾಂಚೋಲಿ ಪುತ್ರ ಸೂರಜ್‌ ಪಾಂಚೋಲಿ ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಾಲಿವುಡ್ ನಟ ಸೂರಜ್ ಪಾಂಚೋಲಿ ಅವರಿಗೆ ಶೂಟಿಂಗ್‌ನಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಿಸುವಾಗ ಸುಟ್ಟಗಾಯಗಳಾಗಿದೆ. ಆಗಿರೋ ಗಾಯಕ್ಕೆ ನಟ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ತಂದೆ ಆದಿತ್ಯಾ ಪಾಂಚೋಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮುಂಬೈನ ಫಿಲ್ಮ್ ಸಿಟಿಯಲ್ಲಿ ‘ಕೇಸರಿ ವೀರ್: ಲೆಜೆಂಡ್ ಆಫ್ ಸೋಮನಾಥ್’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವಾಗ ಸೂರಜ್‌ಗೆ ಗಂಭೀರ ಸುಟ್ಟ ಗಾಯಗಳಾಗಿದೆ. ಅದಕ್ಕಾಗಿ ನಟ ಇದೀಗ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಕಿಯ ಬಳಕೆಯನ್ನು ಒಳಗೊಂಡ ಚಿತ್ರೀಕರಣ ಇದಾಗಿದ್ದು, ಈ ವೇಳೆ ಘಟನೆ ಸಂಭವಸಿದೆ. ಚಿತ್ರೀಕರಣದ ವೇಳೆ ನಿಯಂತ್ರಣ ತಪ್ಪಿ ಸೂರಜ್‌ಗೆ ಗಾಯಗಳಾಗಿವೆ. ಸೂರಜ್‌ಗೆ ಚಿಕಿತ್ಸೆ ನಡೆಯುತ್ತಿದೆ. ಉಳಿದಂತೆ ಎಲ್ಲವೂ ಸರಿಯಾಗಿದೆ ಎಂದು ಸೂರಜ್ ತಂದೆ ಆದಿತ್ಯಾ ಪಾಂಚೋಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!