ಹೊಸದಿಗಂತ ವರದಿ ವಿಜಯಪುರ:
ತನ್ನದೇ ಧಾಬಾದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮಹಾಂತೇಶ ಹಿರೇಮಠ (50) ಮೃತಪಟ್ಟವನು.
ಮಹಾಂತೇಶನ ಶವ ನೆಲಕ್ಕೆ ಕಾಲು ತಾಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನೇಣು ಬಿದುಕೊಂಡಿದ್ದಾನೋ ಅಥವಾ ಕೊಲೆಯೋ? ಎನ್ನುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.