ಬಾಲಿವುಡ್ ನಟ ಟೈಗರ್ ತಾಯಿ ಆಯೇಷಾ ಶ್ರಾಫ್ ಗೆ 58.53 ಲಕ್ಷ ವಂಚನೆ: ಕೇಸ್ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರ ತಾಯಿ ಆಯೇಷಾ ಶ್ರಾಫ್ (Ayesha Shroff) ಅವರಿಗೆ ತಮ್ಮ ಮಗನ ಸಂಸ್ಥೆಯಲ್ಲೇ ಸಿಬ್ಬಂದಿಯಾಗಿದ್ದ ಕಿಕ್ ಬಾಕ್ಸರ್ 58.53 ಲಕ್ಷ ರೂ. ವಂಚಿಸಿರುವುದಾಗಿ ಮುಂಬೈ ಪೊಲೀಸ್ (Mumbai Police) ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಆಯೇಷಾ ಶ್ರಾಫ್ ನೀಡಿದ ದೂರಿನ ಪ್ರಕಾರ, ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಫೈಟರ್ (Kickboxing Association) ಅಲನ್ ಫರ್ನಾಂಡಿಸ್ ಅವರನ್ನ ಟೈಗರ್ ಶ್ರಾಫ್ ಅವರ ಎಂಎಂಎ ಮ್ಯಾಟ್ರಿಕ್ಸ್ (MMA Matrix) ಕಂಪನಿಯ ಕಾರ್ಯಾಚರಣೆಯ ನಿರ್ದೇಶಕನನ್ನಾಗಿ ನೇಮಿಸಲಾಗಿತ್ತು.

ಕಂಪನಿಯು ಮಿಶ್ರ ಸಮರ ಕಲೆಗಳಲ್ಲಿ ತರಬೇತಿ ನೀಡುತ್ತದೆ. ಜೊತೆಗೆ ಕಂಪನಿಯ ಆಡಳಿತವನ್ನ ಆಯೇಷಾ ಶ್ರಾಫ್ ನಿರ್ವಹಿಸುತ್ತಾರೆ.
ಅಲನ್ ಸಂಸ್ಥೆಯ ಮೂಲಕ ಭಾರತ ಮತ್ತು ವಿದೇಶಗಳಲ್ಲಿ 11 ಟೂರ್ನಿಗಳನ್ನ ಆಯೋಜಿಸಲು ಹಣ ಸಂಗ್ರಹಿಸಿ, ಅದರಲ್ಲಿ 58.53 ಲಕ್ಷ ರೂ.ಗಳನ್ನು ತನ್ನ ವೈಯಕ್ತಿಕ ಖಾತೆಗೆ ಜಮೆ ಮಾಡಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆಯೇಷಾ ಶ್ರಾಫ್ ಮೇ 3 ರಂದು ದೂರು ದಾಖಲಿಸಿದ್ದು, ನಂತರ ಫೆರ್ನಾಂಡಿಸ್ ವಿರುದ್ಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ವಂಚನೆ, ಕ್ರಿಮಿನಲ್ ಅಪರಾಧ, ನಂಬಿಕೆ ಉಲ್ಲಂಘನೆ ಹಾಗೂ ಇತರ ಅಪರಾಧಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಸಾಂತಾಕ್ರೂಜ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!