ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್ ಇನ್ನೇನು ಕೆಲವೇ ದಿನದಲ್ಲಿ ಅನೌನ್ಸ್ ಆಗಲಿದ್ದು, ಈ ಬಾರಿ ಆಸ್ಕರ್ ವೇದಿಕೆ ವಿಶೇಷವಾಗಿ ಕಾಣಲಿದೆ.
ಯಾಕಂದ್ರೆ ಇಲ್ಲಿ ಭಾರತೀಯರ ಹವಾ ಜೋರಾಗಿರಲಿದೆ, ನಟ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್‌ಟಿಆರ್ ನಾಟು ನಾಟು ಹಾಡಿಗೆ ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ.
ಇನ್ನೊಂದು ವಿಶೇಷತೆ ಅಂದ್ರೆ ಈ ಬಾರಿ ಬಾಲಿವುಡ್‌ನ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣ್ ಆಸ್ಕರ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ.
ಸ್ವತಃ ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ತಾವೇ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ಬಾರಿ ಭಾರತೀಯರಿಂದ ಆಸ್ಕರ್ ಕಂಗೊಳಿಸಲಿದೆ.