ಮಿಸ್ಟರಿ ಮ್ಯಾನ್ ಜೊತೆ ಬಾಲಿವುಡ್ ನಟಿ ಕಂಗನಾ ರಣಾವತ್: ಕೊನೆಗೂ ನೀಡಿದ್ರು ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ನ ​ ನಟಿ ಕಂಗನಾ ರಣಾವತ್ ಮತ್ತೆ ಸುದ್ದಿಯಲ್ಲಿದ್ದು, .ಆದ್ರೆ ಈ ಬಾರಿ ಯಾವುದೇ ಹೇಳಿಕೆ ನೀಡಿ ಅಲ್ಲ. ಬದಲಾಗಿ ಮಿಸ್ಟರಿ ಮ್ಯಾನ್ ಜೊತೆ ಕಾಣಿಸಿಕೊಂಡ ಕಾರಣ .

ಕೆಲವು ದಿನಗಳ ಹಿಂದೆಯಷ್ಟೇ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡುವ ಎಂದು ಹೇಳಿದ್ದ ಕಂಗನಾ, ತಮ್ಮ ಹೇಳಿಕೆಗೆ ಪುಷ್ಟಿ ನೀಡುವಂತೆ ಅನಾಮಧೇಯ ವ್ಯಕ್ತಿಯ ಕೈಹಿಡಿದು, ಜತೆಗಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸದ್ಯ ಈ ಎಲ್ಲಾ ವದಂತಿಗಳಿಗೆ ಉತ್ತರ ಕೊಟ್ಟಿದ್ದಾರೆ.

‘ನೀವು ಫೋಟೋದಲ್ಲಿ ನೋಡಿದ ವ್ಯಕ್ತಿ ನನ್ನ ಬಾಯ್​ಫ್ರೆಂಡ್​ ಅಲ್ಲ! ಆತ ನನ್ನ ಹೇರ್​ ಸ್ಟೈಲಿಸ್ಟ್.​ ನಿನ್ನೆಯಿಂದ ನನಗೆ ಹಲವಾರು ದೂರವಾಣಿ ಕರೆ ಮತ್ತು ಸಂದೇಶಗಳು ಬಂದಿವೆ. ಎಲ್ಲರೂ ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗಳನೇ ಕೇಳಿದ್ದಾರೆ. ನಾನು ಆಗಾಗ್ಗೆ ಸಲೂನ್​ಗೆ ಹೋಗ್ತೀನಿ, ಇದನ್ನು ಬೇರೆ ರೀತಿ ತೋರಿಸಲಾಗುತ್ತಿದೆ. ಒಬ್ಬ ಹುಡುಗ ಮತ್ತು ಹುಡುಗಿ ಒಟ್ಟಿಗೆ ಹೊರಗೆ ಓಡಾಡಿದರೆ ಅವರು ಸಹೋದ್ಯೋಗಿಗಳು, ಸ್ನೇಹಿತರು ಆಗಿರಬಹುದು. ಅದನ್ನು ತಿಳಿಯದೆ ಅನ್ಯರ್ಥಗಳನ್ನು ಕಲ್ಪಿಸಬಾರದು’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!