ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾಲೆಸ್ಟೈನ್- ಇಸ್ರೇಲ್ ಯುದ್ಧ ಮುಂದುವರೆದಿದ್ದು, ಹಮಾಸ್ ಭಯೋತ್ಪಾದಕರು ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡು ಅವರ ವಿರುದ್ಧ ದೌರ್ಜನ್ಯ ಎಸಗುತ್ತಿರುವುದಲ್ಲದೆ ಬರ್ಬರವಾಗಿ ಕೊಲ್ಲುತ್ತಿದ್ದಾರೆ. ಇತ್ತೀಚೆಗಷ್ಟೇ ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿದ್ದ ಬಾಲಿವುಡ್ ನಟಿ ನುಶ್ರುತಾ ಭರುಚಾ ಸುರಕ್ಷಿತವಾಗಿ ಭಾರತ ತಲುಪಿದ್ದಾರೆ. ಈ ನಡುವೆ ಇಸ್ರೇಲ್‌ನಲ್ಲಿರುವ ತಮ್ಮ ಸಂಬಂಧಿಕರ ಹತ್ಯೆಯ ಹಿಂದಿರುವ ಕರಾಳ ಮುಖವನ್ನು ಬಾಲಿವುಡ್ ನಟಿ ತೆರೆದಿಟ್ಟಿದ್ದಾರೆ.
ಭಾರತೀಯ-ಇಸ್ರೇಲಿ ಸಂತತಿಗೆ ಸೇರಿದ ಬಾಲಿವುಡ್ ನಟಿ ಮಧುರಾ ನಾಯಕ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ʻನನ್ನ ತಂಗಿ ಮತ್ತು ಆಕೆಯ ಪತಿಯನ್ನು ಪ್ಯಾಲೆಸ್ತೀನ್ ಭಯೋತ್ಪಾದಕರು ಅವರ ಮಕ್ಕಳ ಎದುರೇ ಕೊಂದಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ನಾನು ನನ್ನ ಅನೇಕ ಸಂಬಂಧಿಕರನ್ನು ಕಳೆದುಕೊಂಡೆ. ಅವರು ಸದಾ ನನ್ನ ನೆನಪಿನಲ್ಲಿ ಉಳಿಯುತ್ತಾರೆ. ನಮ್ಮ ಪ್ರಾರ್ಥನೆಗಳು ಇಸ್ರೇಲ್‌ನಲ್ಲಿರುವ ಎಲ್ಲಾ ಸಂತ್ರಸ್ತರೊಂದಿಗೆ ಇವೆ. ಈ ಸಮಯದಲ್ಲಿ ಎಲ್ಲಾ ಜನರು ಇಸ್ರೇಲ್ ಪರವಾಗಿ ನಿಲ್ಲಬೇಕು. ಭಯೋತ್ಪಾದಕ ದಾಳಿಗಳು ಎಷ್ಟು ಕೆಟ್ಟವು ಎಂಬುದನ್ನು ಜನರು ಪ್ರತ್ಯಕ್ಷವಾಗಿ ನೋಡುತ್ತಿದ್ದಾರೆ. ಹಮಾಸ್ ಉಗ್ರರು ಮಹಿಳೆಯರು, ಮಕ್ಕಳು, ವೃದ್ಧರನ್ನದೆ ಹತ್ಯೆ ಮಾಡುತ್ತಿದ್ದಾರೆ. ನಾನು ಯಾವುದೇ ರೀತಿಯ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಅಲ್ಲಿನ ಸಂತ್ರಸ್ತ ಕುಟುಂಬಗಳಿಗಾಗಿ ನಾವು ಪ್ರಾರ್ಥಿಸಬೇಕುʼ ಎಂಬ ಭಾವನಾತ್ಮಕ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ತಮ್ಮ ಸಂಬಂಧಿಕರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.