ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸೇನೆಯ ಕುರಿತು ಗೇಲಿ ಮಾಡುವ ಕಾಮೆಂಟ್ ಮಾಡುವ ಮೂಲಕ ಬಾಲಿವುಡ್ ನಟಿ ರಿಚಾ ಚಡ್ಡಾ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೇನೆಯ ಕುರಿತು ಗೇಲಿ ಮಾಡಿರುವ ಕಾರಣಕ್ಕೆ ಅವರೀಗ ಟ್ರೋಲ್ ಗಳಿಗೆ ಆಹಾರವಗಿದ್ದು ನೆಟಿಜನ್ ಗಳು ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಭಾರತೀಯ ಸಶಸ್ತ್ರ ಪಡೆಗಳು ಪಿಒಕೆ ಹಿಂಪಡೆಯಲು ಸಿದ್ಧವಾಗಿವೆ ಮತ್ತು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿವೆ ಎಂದು ಉತ್ತರ ಕಮಾಂಡ್ ಕಮಾಂಡಿಂಗ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ʼಗಾಲ್ವಾನ್ ಹಾಯ್ ಎನ್ನುತ್ತಿದೆʼ ಎಂದು ಗೇಲಿ ಮಾಡುವ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಇದರ ವಿರುದ್ಧ ನೆಟಿಜನ್ ಗಳು ರಿಚಾ ಚಡ್ಡಾ ಅವರ ಮೇಲೆ ಹರಿಹಾಯುತ್ತಿದ್ದಾರೆ.
2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಭಾರತೀಯ ಸೈನಿಕರ ದಾಳಿಗೆ ಚೀನಾದ ಹಲವು ಸೈನಿಕರೂ ಸಾವನ್ನಪ್ಪಿದ್ದರು. ಆದರೆ ಇದುವರೆಗೂ ಚೀನಾ ನಿಖರ ಸಂಖ್ಯೆಯನ್ನು ಬಹಿರಂಗ ಪಡಿಸಿಲ್ಲ. ಪ್ರಸ್ತುತ ಸೇನೆಯ ಲೆ.ಜನರಲ್ ಅವರ ಹೇಳಿಕೆಗೆ ಗಾಲ್ವಾನ್ ವಿಷಯವನ್ನು ಪ್ರಸ್ತಾಪಿಸಿ ಗೇಲಿ ಮಾಡಿದ್ದಕ್ಕೆ ನೆಟ್ಟಿಗರು ರಿಚಾ ಚಡ್ಡಾ ಅವರನ್ನು ತರಾಟಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿಜ್ಞಾನಿ ಮತ್ತು ಅಂಕಣಕಾರ ಆನಂದ್ ರಂಗನಾಥನ್ ಅವರು ಭಾರತೀಯ ಸೈನಿಕರು ಹೇಗೆ ಧೈರ್ಯದಿಂದ ತಮ್ಮ ನೆಲವನ್ನು ಹಿಡಿದಿಟ್ಟುಕೊಂಡು ಒಳನುಗ್ಗುವವರ ವಿರುದ್ಧ ಭಾರತದ ನೆಲವನ್ನು ರಕ್ಷಿಸಿದರು ಎಂಬುದನ್ನು ಉಲ್ಲೇಖಿಸಿ ಮೋದಿಯವರ ವಿರುದ್ಧದ ನಿಮ್ಮ ದ್ವೇಷ ಭಾರತ ದ್ವೇಷವಾಗಲು ಬಿಡಬೇಡಿ ಎಂದು ಹೇಳಿದ್ದಾರೆ.
Ambushed with clubs wrapped in barbed wire, attacked with iron rods, 20 of India’s bravest held their ground, until they were swallowed by the freezing Galwan river, but not before they took down 45 intruders.
Don’t let your hatred for Modi transmogrify into hatred for India. pic.twitter.com/6XMKCwlVel
— Anand Ranganathan (@ARanganathan72) November 24, 2022
ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ಭಾರತೀಯ ಸೇನೆಯ ಮೇಲೆ ಇಂತಹ ಗೇಲಿ ಮಾಡುವ ಮೊದಲು ಗಾಲ್ವಾನ್‌ನಲ್ಲಿ ಒಂದು ದಿನ ಕಳೆಯಿರಿ ಎಂದು ಪ್ರತಿಕ್ರಿಯಿಸಿದ್ದಾರೆ.
Why don’t you yourself go and convey the message to our Indian Army? Ek din to guzaro #Galwan mei madam!!
Shame on you #RichaChadha https://t.co/cRcdiHSAtn pic.twitter.com/iIwVrYB245— TrueLibra 🇮🇳 (@Mansi1253) November 24, 2022