ಮರಾಠಿ ಹಾಡು ಹಾಕಲ್ಲ ಎಂದ ಹೋಟೆಲ್ ಸಿಬ್ಬಂದಿ ಮೇಲೆ ಎಂಎನ್‌ಎಸ್ ಕಾರ್ಯಕರ್ತರಿಂದ ಹಲ್ಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹೋಟೆಲ್‌ ನಲ್ಲಿ ಮರಾಠಿ ಹಾಡುಗಳನ್ನು ಹಾಕಲಿಲ್ಲ ಎಂಬ ಕಾರಣಕ್ಕೆ ಮುಂಬೈ ಸಮೀಪದ ವಾಶಿಯಲ್ಲಿರುವ ಹೋಟೆಲ್‌ನ ಸಿಬ್ಬಂದಿಯನ್ನು ಎಂಎನ್‌ಎಸ್ ಥಳಿಸಿದ್ದಾರೆ.
ಹೋಟೆಲ್‌ ನಲ್ಲಿ ಮರಾಠಿ ಹಾಡುಗಳನ್ನು ಹಾಕುವ ವಿಚಾರವಾಗಿ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರು ಮತ್ತು ಹೋಟೆಲ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ನೀವು ಮಹರಾಷ್ಟ್ರದಲ್ಲಿದ್ದೀರಾ.. ಇಲ್ಲಿ ಮರಾಠಿ ಹಾಡನ್ನು ಹಾಕಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದರು. ಈ ವೇಳೆ ಸಿಬ್ಬಂದಿ ಮತ್ತು ವ್ಯವಸ್ಥಾಪಕರು ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸಿದರು, ಆದರೆ ಸಮಸ್ಯೆ ಉಲ್ಬಣಗೊಂಡು ಹಿಂಸಾತ್ಮಕ ತಿರುವು ಪಡೆಯಿತು. ಈ ಘಟನೆಯ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತರ ಹಾಡುಗಳನ್ನು ಪ್ಲೇ ಮಾಡಲಾಗುತ್ತಿರುವ ಬಗ್ಗೆ ಆಕ್ಷೇಪಿಸಿ ಕೆಲವು ಮಹಿಳೆಯರು ಹೋಟೆಲ್ ಸಿಬ್ಬಂದಿಯೊಂದಿಗೆ ವಾದಿಸುತ್ತಿರುವುದನ್ನು ವಿಡಿಯೋ ತೋರಿಸುತ್ತಿದೆ. ಮ್ಯಾನೇಜರ್ ಮಹಿಳೆಯ ಕೋರಿಕೆಯನ್ನು ನಿರಾಕರಿಸುತ್ತಾರೆ. ಈ ವೇಳೆ ಪಕ್ಕದಲ್ಲಿ ನಿಂತಿದ್ದ ಎಂಎನ್ ಎಸ್ ಕಾರ್ಯಕರ್ತರೊಬ್ಬರು, ‘ನಾವು ಮಹಾರಾಷ್ಟ್ರದಲ್ಲಿದ್ದೇವೆ, ಮರಾಠಿ ಹಾಡುಗಳಷ್ಟೇ ನುಡಿಸಿ ಎಂದು ತಾಕೀತು ಮಾಡಿದ್ದಾರೆ. ಇದಕ್ಕೆ ಮ್ಯಾನೇಜರ್ ಆಗುವುದಿಲ್ಲ ಎಂದಾಗ ಎಂಎನ್ಎಸ್ ಕಾರ್ಯಕರ್ತ ಕಪಾಳಮೋಕ್ಷ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಆ ಬಳಿಕ ಇತರರೂ ಸೇರಿಕೊಂಡು ಮ್ಯಾನೇಜರ್‌ಗೆ ಥಳಿಸಿದ್ದಾರೆ. ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!