Wednesday, June 7, 2023

Latest Posts

ಕಟೀಲು ಶ್ರೀ ಕ್ಷೇತ್ರಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭೇಟಿ: ಶ್ರೀ ದೇವರಿಗೆ ಹರಕೆ ಸೀರೆ ಸಮರ್ಪಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ,ಪತಿ ರಾಜ್ ಕುಂದ್ರಾ, ಮಕ್ಕಳು, ಸಹೋದರಿ ನಟಿ ಶಮಿತಾ ಶೆಟ್ಟಿ, ಶಿಲ್ಪಾ ಶೆಟ್ಟಿಯವರ ತಾಯಿ ಭೇಟಿ ನೀಡಿ ಸೇವೆ ಸಲ್ಲಿಸಿದರು.

ಹೆಣ್ನು ಮಗುವಿಗಾಗಿ ಹರಕೆ ಹೊತ್ತುಕೊಂಡಿದ್ದ ಶಿಲ್ಪಾ ಶೆಟ್ಟಿ ದಂಪತಿ ಸೀರೆ ಹರಕೆ ಒಪ್ಪಿಸಿದರು. ಮೊಕ್ತೇಸರ ವಾಸುದೇವ ಆಸ್ರಣ್ಣ ಪ್ರಸಾದ ನೀಡಿದರು. ಅರ್ಚಕರಾದ ಅನಂತ ಆಸ್ರಣ್ಣ ಶ್ರೀಹರಿ ಆಸ್ರಣ್ಣ, ವಕೀಲ ರವಿ ಪೂಜಾರಿ ಉಪಸ್ಥಿತರಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇಗುಲದ ನಾಗಸ್ವರ ವಾದಕರಾದ ಲಿಂಗಪ್ಪ ಸೇರಿಗಾರರ ವಾದ್ಯವಾದನವನ್ನು ಆಲಿಸಿದ ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ಕಟೀಲು ರಥಬೀದಿಯಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ಕೆಲಹೊತ್ತು ವೀಕ್ಷಿಸಿ, ವೇಷಗಳ ಪೋಟೋ ತೆಗೆದು ಸಂಭ್ರಮಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!