ಬಾಲಿವುಡ್ ನಟಿ ಯಾಮಿ ಗೌತಮ್ ಮನೆಗೆ ಹೊಸ ಅತಿಥಿ ಆಗಮನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಯಾಮಿ ಗೌತಮ್ ಅಕ್ಷಯ ತೃತೀಯದಂದು (ಮೇ 10) ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದಾರೆ.

ಈ ವಿಚಾರವನ್ನು ಈಗ ರಿವೀಲ್ ಮಾಡಿದ್ದಾರೆ. ಅದಷ್ಟೇ ಅಲ್ಲ, ಮಗುವಿಗೆ ನಾಮಕರಣ ಮಾಡಿದ್ದಾರೆ.
ಮಗು ಜನಸಿರುವ ವಿಚಾರವನ್ನು 10 ದಿನಗಳ ನಂತರ ನಟಿ ಅನೌನ್ಸ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.

ಸರ‍್ಯ ಆಸ್ಪತ್ರೆಯ ವೈದ್ಯಕೀಯ ವೃತ್ತಿಪರರಿಗೆ, ವಿಶೇಷವಾಗಿ ಡಾ. ಭೂಪೇಂದರ್ ಅವಸ್ತಿ ಮತ್ತು ಡಾ. ರಂಜನಾ ಧನು ಅವರ ಪರಿಣತಿ ಹಾಗೂ ದಣಿವರಿಯದ ಪ್ರಯತ್ನ. ಈ ಸಂತೋಷದಾಯಕ ಸಂದರ್ಭವನ್ನು ಸಾಧ್ಯವಾಗಿಸಿದಕ್ಕೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ.

ಪೋಷಕರಾಗಿ ಈ ಸುಂದರ ಪ್ರಯಾಣವನ್ನು ನಾವು ಪ್ರಾರಂಭಿಸಿದಾಗ, ನಮ್ಮ ಮಗನಿಗಾಗಿ ಕಾಯುತ್ತಿರುವ ಉಜ್ವಲ ಭವಿಷ್ಯವನ್ನು ನಾವು ಕುತೂಹಲದಿಂದ ನಿರೀಕ್ಷಿಸುತ್ತೇವೆ. ಅವನು ಸಾಧಿಸುವ ಪ್ರತಿ ಮೈಲಿಗಲ್ಲು, ಅವರು ನಮ್ಮ ಇಡೀ ಕುಟುಂಬಕ್ಕೆ ಮತ್ತು ನಮ್ಮ ಪ್ರೀತಿಯ ರಾಷ್ಟ್ರಕ್ಕೆ ಹೆಮ್ಮೆಯ ದಾರಿದೀಪವಾಗಿ ಬೆಳೆಯುತ್ತಾನೆ ಎಂಬ ಭರವಸೆ ಮತ್ತು ನಂಬಿಕೆಯಿಂದ ನಾವಿದ್ದೇವೆ ಎಂದು ಯಾಮಿ ಬರೆದುಕೊಂಡಿದ್ದಾರೆ. ನಮ್ಮ ಮಗನ ಆಗಮನದ ವಿಚಾರವನ್ನು ಹಂಚಿಕೊಳ್ಳಲು ಬಹಳ ಥ್ರಿಲ್ ಆಗುತ್ತಿದೆ. ‘ವೇದವಿದ್’ ಅಕ್ಷಯ ತೃತೀಯ ದಿನ ಹುಟ್ಟಿದ. ಅವನಿಗೆ ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆ ಬೇಕು ಎಂದು ನಟಿ ಯಾಮಿ ಪೋಸ್ಟ್ ಮಾಡಿದ್ದಾರೆ.

‘ವೇದವಿದ್’ ಅಂದರೆ ವೇದಗಳಲ್ಲಿ ಪಾರಂಗತನಾದವನು ಎನ್ನುವ ಅರ್ಥವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!