ಬಾಲಿವುಡ್‌ ನಟಿಯರಿಗೆ ಕರ್ನಾಟಕ ಇಷ್ಟ! ಚಂದ್ರಮೌಳೀಶ್ವರ ದೇಗುಲಕ್ಕೆ ಭೇಟಿ ನೀಡಿದ ಸಾರಾ ಅಲಿ ಖಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ ನಟಿಯರಿಗೆ ದಕ್ಷಿಣ ಭಾರತದ ಸ್ಥಳಗಳು, ದೇವಸ್ಥಾನಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಬಾಲಿವುಡ್‌ ಮಂದಿ ಹಂಪಿ, ಧರ್ಮಸ್ಥಳ, ಕರಾವಳಿ ಭಾಗದ ದೇಗುಲಗಳಿಗೆ ಭೇಟಿ ನೀಡುವ ಸುದ್ದಿ ಓದಿರುತ್ತೀರಿ. ಇದೀಗ ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌ ಕೂಡ ಹುಬ್ಬಳ್ಳಿಯ ದೇಗುಲವೊಂದಕ್ಕೆ ಭೇಟಿ ನೀಡಿದ್ದಾರೆ.

ಬಾಲಿವುಡ್​ನ ಸ್ಟಾರ್ ಯುವನಟಿ ಸಾರಾ ಅಲಿ ಖಾನ್ ಹುಬ್ಬಳ್ಳಿಯ ಉಣಕಲ್​ನ ಚಂದ್ರಮೌಳೀಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸರಳವಾಗಿ ಸೆಲ್ವಾರ್ ಕಮೀಜ್ ತೊಟ್ಟು ದೇವಾಲಯಕ್ಕೆ ಬಂದಿದ್ದ ಸಾರಾ ಅಲಿ ಖಾನ್, ದೇವಾಲಯದ ಆವರಣದಲ್ಲಿ ಕೆಲ ಚಿತ್ರಗಳನ್ನು ತೆಗೆಸಿಕೊಂಡಿದ್ದು, ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಚಂದ್ರಮೌಳೇಶ್ವರ ದೇವಾಲಯ, ಉಣ್ಕಲ್ ಎಂದು ಲೊಕೇಶನ್ ಅನ್ನು ಪಿನ್ ಸಹ ಮಾಡಿದ್ದಾರೆ.

ನಟಿ ಸಾರಾ ಅಲಿ ಖಾನ್ ತಂದೆ ಸೈಫ್ ಅಲಿ ಖಾನ್ ಕೆಲ ವಾರಗಳ ಹಿಂದಷ್ಟೆ ಅಗಂತುಕನೊಬ್ಬನಿಂದ ಚಾಕು ಇರಿತಕ್ಕೆ ಒಳಗಾಗಿದ್ದರು. ಆ ಸಮಯದಲ್ಲಿ ಹೊತ್ತಿದ್ದ ಹರಕೆ ತೀರಿಸಲು ಸಾರಾ ಅಲಿ ಖಾನ್ ಇಷ್ಟು ದೂರ ಚಂದ್ರಮೌಳೇಶ್ವರ ದೇವಾಲಯಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!