ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನಲ್ಲಿ ಭಾರತದ ಮೊದ ಆಪಲ್ ಸ್ಟೋರ್ ಉದ್ಘಾಟನೆಯಾಗಿದೆ. ಆಪಲ್ ಸಿಇಒ ಟಿಮ್ ಕುಕ್ ಆಪಲ್‌ಸ್ಟೋರ್‌ನ್ನು ಉದ್ಘಾಟನೆ ಮಾಡಿದ್ದು, ಉದ್ಘಾಟನೆ ನಂತರದ ಪಾರ್ಟಿಗೆ ಬಾಲಿವುಡ್‌ನ ಸಾಕಷ್ಟು ಸೆಲೆಬ್ರಿಟಿಗಳು ಬಂದಿದ್ದರು..
ಪ್ರತೀ ಸೆಲೆಬ್ರಿಟಿಗಳು ಕುಕ್ ಜತೆ ಫೋಟೊ ತೆಗೆಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಯಾವ್ಯಾವ ಸೆಲೆಬ್ಸ್ ಬಂದಿದ್ದಾರೆ ನೋಡಿ..
ರಾಕುಲ್ ಪ್ರೀತ್, ಮಾಧುರಿ ದೀಕ್ಷಿತ್, ಮೌನಿ ರಾಯ್, ಸೋನಾಲಿ ಬೇಂದ್ರೆ, ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹ, ರವೀನಾ ಟಂಡನ್, ಅರ್ಮಾನ್ ಮಲಿಕ್, ಎ.ಆರ್. ರೆಹಮಾನ್, ಸೋನಮ್ ಕಪೂರ್, ನೇಹಾ ಧುಪಿಯಾ, ಶಿಲ್ಪಾ ಶೆಟ್ಟಿ ಮುಂತಾದ ಸೆಲೆಬ್ರಿಟಿಗಳು ಆಗಮಿಸಿದ್ದಾರೆ.