VIRAL VIDEO| ನಿಜವಾದ ಪ್ರೀತಿಗೆ ಪುರಾವೆ, ಮನ ಮುಟ್ಟುವಂತಿದೆ ವೃದ್ಧ ದಂಪತಿ ಕಾಳಜಿಯ ದೃಶ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವೃದ್ಧಾಪ್ಯದಲ್ಲಿ ದಂಪತಿ ನಡುವೆ ಬಾಂಧವ್ಯ ಹೆಚ್ಚುತ್ತದೆ. ಕಾರಣ ಮಕ್ಕಳ ನಿರ್ಲಕ್ಷ್ಯ ಇರಬಹುದು, ಅನಾರೋಗ್ಯ ಇರಬಹುದು. ಸಣ್ಣಪುಟ್ಟ ಕೆಲಸಗಳಿಗೂ ಒಬ್ಬರನ್ನೊಬ್ಬರು ಅವಲಂಬಿಸಿರುತ್ತಾರೆ. ವೃದ್ಧರೊಬ್ಬರು ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಗೆ ಪ್ರೀತಿಯಿಂದ ಉಣಬಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪತಿ-ಪತ್ನಿಯರ ನಡುವಿನ ಬಾಂಧವ್ಯ ಬಹಳ ದೊಡ್ಡದು. ವೃದ್ಧಾಪ್ಯದಲ್ಲಿ ಪರಸ್ಪರರ ಒಡನಾಟ ಹೆಚ್ಚು ಅಗತ್ಯ. ಇತ್ತೀಚಿನ ದಿನಗಳಲ್ಲಿ  ಮಕ್ಕಳು ಕುಟುಂಬದಿಂದ ದೂರ ಹೋಗುತ್ತಿದ್ದಾರೆ, ಆದ್ದರಿಂದ ಅನೇಕ ವಯಸ್ಕರು ವೃದ್ಧಾಶ್ರಮಕ್ಕೆ ಸೀಮಿತರಾಗಿದ್ದಾರೆ. ಆದಷ್ಟು ಮಕ್ಕಳ ಮೇಲೆ ಅವಲಂಬಿತವಾಗದಂತೆ ನಿರ್ಧಾರಗಳನ್ನೂ ತೆಗೆದುಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂಡಿಯನ್ ಐಡಲ್ ರನ್ನರ್ ಅಪ್ ರಾಕೇಶ್ ಮೈನಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಂಡ ಅನುಭವವನ್ನು ಹಂಚಿಕೊಂಡಿದ್ದಾರೆ. ರೈಲಿನಲ್ಲಿ ವೃದ್ಧ ದಂಪತಿಯ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಇಷ್ಟು ವಯಸ್ಸಿನಲ್ಲೂ ಪ್ರೀತಿ, ಆತ್ಮೀಯತೆ ಹಂಚಿಕೊಳ್ಳುವುದು ನಿಜಕ್ಕೂ ಮೆಚ್ಚುವಂತದ್ದು ಎಂಬುದು ಕೆಲವರ ಅಭಿಪ್ರಾಯ..ಈ ವಿಡಿಯೋ ಮನಮುಟ್ಟುವಂತಿದೆ.

https://www.instagram.com/reel/Cq5dt7MRY_y/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!