September 29, 2026
Tuesday, September 29, 2026
spot_img

ʼಯುವ ದಸರಾʼಕ್ಕೆ ಬಾಲಿವುಡ್‌ ರಂಗು: ಧುರಂಧರ್‌ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಸಂಗೀತ ಸಂಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೈಸೂರಿನಲ್ಲಿ ನಡೆಯಲಿರುವ ನಾಡಹಬ್ಬದ ಆಚರಣೆಗೆ ಈಗಾಗಲೇ ಸಾಕಷ್ಟು ತಯಾರಿ ನಡೆದಿದೆ. ಈ ಬಾರಿ ಯುವ ದಸರಾ ಕಾರ್ಯಕ್ರಮದಲ್ಲಿ ಬಾಲಿವುಡ್‌ ಗಾಯಕಿಯಿಂದ ಸಂಗೀತದೌತಣ ನಡೆಯಲಿದೆ.

ಹೌದು, ಬಾಲಿವುಡ್‌ ಗಾಯಕಿ, ದುರಂಧರ್ ಹಾಡನ್ನು ಹಾಡಿ ಫೇಮಸ್‌ ಆಗಿರುವ ಜಾಸ್ಮಿನ್‌ ಸ್ಯಾಂಡ್ಲಾಸ್‌ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಕ್ಟೋಬರ್ 13ರಿಂದ 17ರವರೆಗೆ ಐದು ದಿನಗಳ ಕಾಲ ಯುವ ದಸರಾ ನಡೆಯಲಿದ್ದು, ಪ್ರತಿದಿನವೂ ಖ್ಯಾತ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಈ ಬಾರಿಯ ಯುವ ದಸರಾ ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಹಲವು ಖ್ಯಾತ ಗಾಯಕರು ಮತ್ತು ಕಲಾವಿದರು ಭಾಗವಹಿಸಲಿದ್ದಾರೆ. ಅಕ್ಟೋಬರ್ 13ರಂದು ಬಿ.ಅಜನೀಶ್ ಲೋಕನಾಥ್ ಮತ್ತು ತಂಡ, ಅಕ್ಟೋಬರ್ 14ರಂದು ಶಂಕರ್–ಎಹ್ಸಾನ್–ಲಾಯ್, ಅಕ್ಟೋಬರ್ 15ರಂದು ಸಿದ್ ಶ್ರೀರಾಮ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಕ್ಟೋಬರ್ 16ರಂದು ಸ್ಯಾಂಡಲ್‌ವುಡ್ ನೈಟ್ಸ್ ಆಯೋಜಿಸಲಾಗಿದ್ದು, ಶಿವರಾಜ್‌ಕುಮಾರ್, ರಚಿತಾ ರಾಮ್ ಸೇರಿದಂತೆ ಹಲವು ಕಲಾವಿದರು ಹಾಗೂ ಗಾಯಕರು ಭಾಗವಹಿಸಲಿದ್ದಾರೆ.

ಯುವ ದಸರಾ ಕಾರ್ಯಕ್ರಮದ ಕೊನೆಯ ದಿನವಾದ ಅಕ್ಟೋಬರ್‌17ರಂದು ಜಾಸ್ಮಿನ್‌ ಮೈಸೂರಿನಲ್ಲಿ ಬಾಲಿವುಡ್‌ ರಂಗನ್ನು ಹರಡಲಿದ್ದಾರೆ. ರಾತ್ರಿ 7:30ರಿಂದ 10:30ರವರೆಗೆ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಯುವ ದಸರಾ ಕಾರ್ಯಕ್ರಮಗಳು ಮೈಸೂರಿನ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ಸಮೀಪದ 100 ಎಕರೆ ಪ್ರದೇಶದಲ್ಲಿ ಅಕ್ಟೋಬರ್ 13ರಿಂದ 17ರವರೆಗೆ ಸಂಜೆ 5:30ರಿಂದ ರಾತ್ರಿ 10:30ರವರೆಗೆ ನಡೆಯಲಿವೆ.

Must Read