ಕಿಂಗ್, ಬಾದ್‌ಷಾ, ಸುಲ್ತಾನ್ ಇರೋವರೆಗೂ ಬಾಲಿವುಡ್‌ ಮುಳುಗುತ್ತಿರುತ್ತದೆ: ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

‘ದಿ ಕಾಶ್ಮೀರ್ ಫೈಲ್ಸ್ ‘ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬಾಲಿವುಡ್‌ನ ಖಾನ್‌, ಬಾದ್‌ಷಾ, ಸುಲ್ತಾನ್‌ಗಳ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್‌ನಲ್ಲಿ ಖಾನ್‌ಗಳ ಪ್ರಭಾವ, ಪ್ರತಿಷ್ಠಿ, ಅನುಯಾಯಿಗಳು, ಅಭಿಮಾನಿಗಳು ಎಷ್ಟು ಇದೆ ಎಂದು ಹೊಸತಾಗಿ ಹೇಳಬೇಕಿಲ್ಲ. ಈಗ ಇವರ ಬಗ್ಗೆ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
‘ಎಲ್ಲಿಯವರೆಗೆ ಬಾಲಿವುಡ್ ಕಿಂಗ್, ಬಾದ್‌ಷಾ, ಸುಲ್ತಾನ್ ಎನ್ನುವ ಹೆಸರು ಹೊಂದಿರುತ್ತದೆಯೋ, ಅಲ್ಲಿವರೆಗೆ ಮುಳುಗುತ್ತಿರುತ್ತದೆ. ಯಾವಾಗ ಜನರಿಂದ ಜನರ ಕಥೆ ಹೇಳುವ ಚಿತ್ರರಂಗವನ್ನಾಗಿ ಮಾಡುತ್ತೇವೆಯೋ ಆಗ ಚಿತ್ರರಂಗ ಜಾಗತಿಕವಾಗಿ ವೈಭವದಿಂದ ಕೂಡುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ಖಾನ್‌ ( ಶಾರುಖ್ ಖಾನ್, ಆಮೀರ್ ಖಾನ್, ಸಲ್ಮಾನ್ ಖಾನ್ ), ಶಾರುಖ್ ಖಾನ್‌ ಅವರನ್ನು ಬಾಲಿವುಡ್‌ನ ಕಿಂಗ್, ಬಾದ್‌ಷಾ ಅಂತ ಕರೆಯುತ್ತಾರೆ, ಸಲ್ಮಾನ್ ಖಾನ್ ಅವರನ್ನು ಸುಲ್ತಾನ್ ಎನ್ನುವರು. ಇವರ ಬಗ್ಗೆ ವಿವೇಕ್ ಅಗ್ನಿಹೋತ್ರಿ ಮಾತನಾಡಿದ್ದಾರೆ.
ಕೆಲವರು ಇವರ ಮಾತಿಗೆ ಧ್ವನಿಯಾದರೆ, ಇನ್ನು ಕೆಲವರು ಟ್ರೋಲ್ ಮಾಡಿದ್ದಾರೆ.

ಸದ್ಯ ವಿವೇಕ್ ಅಗ್ನಿಹೋತ್ರಿ ಅವರು ‘ದಿ ದೆಹಲಿ ಫೈಲ್ಸ್’ ಸಿನಿಮಾ ಕೆಲಸ ಮಾಡುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನಿರ್ದೇಶನಕ್ಕೂ ಮುನ್ನ ಅವರು ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಸಿಂಗ್ ಅವರ ಸಾವಿನ ರಹಸ್ಯದ ಕುರಿತ ‘The Tashkent Files’ ಚಿತ್ರವನ್ನು ವಿವೇಕ್ ನಿರ್ದೇಶನ ಮಾಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!