ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರ ಜಿಲ್ಲೆಯ ಬಿಡದಿ ಬಳಿ ಇರುವ ವಂಡರ್ ಲಾ ಅಮ್ಯುಸ್ಮೆಂಟ್ ಪಾರ್ಕ್‌ಗೆ ಬಾಂಬ್ ಬೆದರಿಕೆಯ ಸಂದೇಶ ಬಂದಿದೆ.
ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ ಆಡಳಿತ ಹಾಗೂ ಸಿಬ್ಬಂದಿಗೆ ಇ-ಮೇಲ್ ಬಂದಿದೆ. ಇಂಗ್ಲಿಷ್ ಬಳಸಿ ಉರ್ದು ಭಾಷೆಯಲ್ಲಿ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿದೆ.
ಸಂಡೇ ನಿನ್ನ ಹಾಗೂ ವಂಡರ್ ಲಾ ಪಾರ್ಕ್‌ಗೆ ಮೂರು ಬಾಂಬ್ ಸಿಡಿಸುತ್ತೇವೆ ಇನ್ಶಾಅಲ್ಲಾ..! ಕನ್ನಡದ ಕಾಫೀರರು ಮುಸ್ಲಿಂರ ಮೇಲೆ ಮಾಡುತ್ತಿರುವ ದಬ್ಬಾಳಿಕೆಯ ಶಿಕ್ಷೆ ಸಿಗಲಿದೆ ಎಂದು ಸಂದೇಶ ಕಳಿಸಿದ್ದಾರೆ.
ಕಳೆದ ಆಗಸ್ಟ್ 3ರಂದು ಹುಸಿ ಬಾಂಬ್ ಬೆದರಿಕೆ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೊಹಮ್ಮದ್ ಇರ್ಫಾನ್ ಜಿಹಾದಿ ಎಂಬ ಹೆಸರಿನ ಇ -ಮೇಲ್‌ನಿಂದ ಬಂದಿದೆ. ಬಿಡದಿ ಪೊಲೀಸರು ಇ ಮೇಲ್ ಮಾಡಿದ ಆರೋಪಿಯನ್ನು ಹುಡುಕುತ್ತಿದ್ದಾರೆ. ಬಾಂಬ್ ಬೆದರಿಕೆ ಬಳಿಕ ಇಡೀ ಪಾರ್ಕ್ ಪರಿಶೀಲನೆ ಮಾಡಲಾಗಿದೆ.