July 2, 2026
Thursday, July 2, 2026
spot_img

ಯಾದಗಿರಿಯ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್‌ ಥ್ರೆಟ್‌: ಆರ್‌ಡಿಎಕ್ಸ್ ಸ್ಪೋಟಿಸುವುದಾಗಿ ಇ-ಮೇಲ್‌ ‌

ಹೊಸದಿಗಂತ ವರದಿ ಯಾದಗಿರಿ:

ಇಲ್ಲಿನ ಮುದ್ನಾಳ್ ಕ್ರಾಸ್ ಹತ್ತಿರ ಇರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಹುಸಿ ಬಾಂಬ್ ಬೆಸರಿಗೆ ಇ-ಮೇಲ್ ಬಂದಿದ್ದು ಅಧಿಕಾರಿ, ಸಿಬ್ಬಂದಿ, ವಕೀಲರು ಮತ್ತು ಸಾರ್ವಜನಿಕರು ಹೆದರಿ ಕೋರ್ಟ್ ನಿಂದ ಹೊರ ಬಂದ ಘಟನೆ ಗುರುವಾರ ನಡೆದಿದೆ.

ಇತ್ತೀಚೆಗೆ ಹುಸಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗಿದ್ದು, ಈ ಸರದಿ ಯಾದಗಿರಿಗೂ ಬಂದಿದೆ. ಜಮಿಷಾ ಮುಬೀನ್ ಎಂಬ ಮೇಲ್ ಐಡಿಯಿಂದ ಹುಸಿ ಬೆದರಿಕೆ ಕರೆ ಬಂದಿದ್ದು 13 ವಿಷಾನೀಲ‌ ಹಾಗೂ ಆರ್ ಡಿಎಕ್ಸ್ ಸ್ಪೋಟಿಸುವುದಾಗಿ ತಿಳಿಸಿದೆ.

ಕೂಡಲೇ ಸ್ಥಳಕ್ಕೆ ಯಾದಗಿರಿ ಎಎಸ್ ಇ,ಬಾಂಬ್ ಪತ್ತೆದಳ ,ಶ್ವಾನ ತಂಡ ಭೇಟಿ‌ ನೀಡಿದ್ದು, ಕೋರ್ಟ್ ನ ವಿವಿಧೆಡೆ ಪೊಲೀಸ್ ತಂಡ ಪರಿಶೀಲನೆ ನಡೆಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !