ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ವೈಟ್‌ಫೀಲ್ಡ್‌ನ ಮಾಲ್ ಸೇರಿ ಹಲವು ಮಾಲ್‌ಗಳಿಗೆ ಸೋಮವಾರ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
ಇ-ಮೇಲ್ ಮುಖಾಂತರ ಬಾಂಬ್ ಬೆದರಿಕೆ ಬಂದಿದ್ದು, ನೀವು ಯಾರೂ ಬದುಕಲು ಅರ್ಹರಲ್ಲ. ಕಟ್ಟಡದ ಒಳಗಿರುವ ಎಲ್ಲರ ಜೀವ ರಕ್ತದ ಮಡುವಿನಲ್ಲಿ ಅಂತ್ಯವಾಗುತ್ತೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಸ್ಫೋಟದ ಬೆನ್ನಲ್ಲೇ ಮಾಲ್‌ಗೆ ಬಾಂಬ್ ಬೆದರಿಕೆ ಸಂದೇಶ ಬಂದಿರುವುದರಿಂದ ಆತಂಕ ಮೂಡಿಸಿದೆ. ಕಟ್ಟಡದ ಒಳಗೆ ಬಾಂಬ್ ಇದೆ. ಈ ಕಟ್ಟಡದ ಒಳಗಿರುವ ಎಲ್ಲರ ಜೀವ ರಕ್ತದ ಮಡುವಿನಲ್ಲಿ ಅಂತ್ಯವಾಗುತ್ತದೆ. ನಾನು ಮಾನವೀಯತೆಯನ್ನು ದ್ವೇಷಿಸುವೆ, ನೀವು ಯಾರೂ ಬದುಕಲು ಅರ್ಹರಲ್ಲ. ನಿಮ್ಮನ್ನೆಲ್ಲಾ ಕೊಲ್ಲುತ್ತೇನೆ, ನಾವು ಭಯೋತ್ಪಾದನೆಯನ್ನು ನಿಲ್ಲಿಸುವುದಿಲ್ಲ. ಈ ಸಂದೇಶ ಕಳುಹಿಸಿರುವುದು KNR ಎಂದು ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ಪರಿಶೀಲಿಸಿದಾಗ, ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುವುದು ತಿಳಿದುಬಂದಿದೆ. ಹೀಗಾಗಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.