‘ಗಂಗೂಬಾಯಿ ಕಾಥಿಯಾವಾಡಿ’ ವಿರುದ್ದದ ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್​ನ ಬಹು ನಿರೀಕ್ಷಿತ ‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರದ ವಿರುದ್ಧ ಸಲ್ಲಿಸಿದ್ದ ಅರ್ಜಿಗಳನ್ನು ಬಾಂಬೆ ಹೈಕೋರ್ಟ್​ ವಜಾ ಮಾಡಿದ್ದು, ಈ ಮೂಲಕ ಚಿತ್ರ ರಿಲೀಸ್​ ಗೆ ಇದ್ದ ಅಡೆ ತಡೆ ತೆರವಾಗಿದೆ.
ಇದೇ 25ರಂದು ರಿಲೀಸ್​ ಆಗಲಿರುವ ಈ ಸಿನಿಮಾದ ವಿರುದ್ಧ ರೆಡ್​ಲೈಟ್​ ಏರಿಯಾ ಎಂದೇ ಖ್ಯಾತವಾಗಿರುವ ಕಾಮಾಟಿಪುರ ಮತ್ತು ಕಾಥಿಯಾವಾಡಿಯ ಜನರು, ಗಂಗೂಬಾಯಿಯ ದತ್ತು ಮಗ ಹಾಗೂ ಕಾಂಗ್ರೆಸ್​ ಶಾಸಕ ಕೋರ್ಟ್​ ಮೊರೆ ಹೋಗಿದ್ದರು.
ಕಾಮಾಟಿಪುರ ಮತ್ತು ಕಾಥಿಯಾವಾಡಿಯದ ಬಗ್ಗೆ ಈ ಸಿನಿಮಾದಲ್ಲಿ ಹೆಸರು ಉಲ್ಲೇಖವಾಗಿದ್ದು, ಇದರಿಂದ ಈ ಪ್ರದೇಶಗಳಿಗೆ ಕೆಟ್ಟ ಹೆಸರು ಬರುತ್ತದೆ. ಈ ಹಿನ್ನೆಲೆಯಲ್ಲಿ, ಆ ಹೆಸರುಗಳನ್ನು ತೆಗೆದುಹಾಕುವಂತೆ ಕೋರ್ಟ್​ನಲ್ಲಿ ಕೋರಲಾಗಿತ್ತು.
ಇದೀಗ ಇದ್ದ ಅಡೆ ತಡೆಗಳು ತೆರವು ಆಗಿದ್ದು, ಈ ಮೂಲಕ ಸಿನಿಮಾ ರಿಲೀಸ್ ಗೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!