ಹೊಸದಿಗಂತ ಡಿಜಿಟಲ್ ಡೆಸ್ಕ್:
1. ರಾಜ್ಯದ ಎಲ್ಲರನ್ನು ಒಳಗೊಂಡ ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಮಾಡುವುದು.
2. ದುರ್ಬಲ ವರ್ಗದವರ ರಕ್ಷಣೆ ಮತ್ತು ಏಳಿಗೆಗಾಗಿ ಒತ್ತು ನೀಡುವುದು. ಅವರನ್ನು ಪರಾವಲಂಬಿಯನ್ನಾಗಿ ಮಾಡದೇ ಸ್ವಾಭಿಮಾನದ ಬದುಕು ನಡೆಸಲು ಶಿಕ್ಷಣ ಉದ್ಯೋಗ ಮತ್ತು ಆರೋಗ್ಯ ಸೇವೆ ಒದಗಿಸುವುದು
3. ರಾಜ್ಯದ ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ವಿವಿಧ ವಲಯಗಳ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ ಮಾಡಿ, ಮಾನವ ಅಭಿವೃದ್ಧಿ ಸೂಚ್ಯಂಕ ರಾಜ್ಯಕ್ಕೆ ಸಮನಾಗಿಸುವುದು.
4. ಕೃಷಿ ಕೈಗಾರಿಕೆ ಸೇವಾ ವಲಯದಲ್ಲಿ ಹೆಚ್ಚಿನ ಜನ ಪಾಲುದಾರರಿಂದ ಹೆಚ್ಚಿನ ಅಭಿವೃದ್ಧಿ ಮಾಡುವುದು.
5. ಹೊಸ ಚಿಂತನೆ ಹೊಸ ಚೈತನ್ಯ ಹೊಸ ಮುನ್ನೋಟದೊಂದಿಗೆ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡಲಾಗುವುದು.