Tuesday, March 21, 2023

Latest Posts

ಶ್ರೀ ಸಿದ್ಧಾರೂಢರಮಠಕ್ಕೆ‌ ಭೇಟಿ, ಅಜ್ಜದ ದರ್ಶನ ಪಡೆದು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಬೊಮ್ಮಾಯಿ‌

ಹೊಸದಿಗಂತ ವರದಿ ಹುಬ್ಬಳ್ಳಿ:

ಹುಬ್ಬಳ್ಳಿ ನಗರದ ಅದ್ವೈತ್ ಸಿದ್ಧಾಂತ ಮಹಾಮೇರು ಎಂಬ ಖ್ಯಾತಿಯ ಶ್ರೀ ಸಿದ್ಧಾರೂಢರಮಠಕ್ಕೆ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಭೇಟಿ ನೀಡಿ ಅಜ್ಜನ ದರ್ಶನ ಪಡೆದರು. ಅದರ ಜೊತೆಗೆ ಸಿದ್ಧಾರೂಡರ ಶಿವರಾತ್ರಿ ಜಾತ್ರಾ ಮಹೋತ್ಸವ ಭಾಗವಹಿಸಿದ್ದು ಇನ್ನೂ ವಿಶೇಷವಾಗಿದೆ.

ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಠಕ್ಕೆ‌ ಭೇಟಿ ನೀಡಿ ಸಿದ್ಧಾರೂಢ ಅಜ್ಜನ ದರ್ಶನ ಪಡೆದು ಪುನೀತರಾದರು. ಗುರುರಾಜ ಸಿದ್ಧರೂಢ ಸಮರ್ಥ ಎಂಬ ಅಜ್ಜನ ಭಕ್ತಿ ಗೀತೆ ಹಾಡಿ ಮಹಾಮಂಗಳಾರತಿ ಸಲ್ಲಿಸಿದರು.

ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ ಸಿದ್ಧಾರೂಢಮಠದ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಅಷ್ಟೇ ಅಲ್ಲದೆ ಅನ್ಯ ರಾಜ್ಯದಿಂದ‌ ಅಸಂಖ್ಯಾತ ಭಕ್ತರು ಭಾಗವಹಿಸಿ ಭಕ್ತಿ ಮೆರೆಯುತ್ತಾರೆ.

ಇನ್ನೂ ಮಠದಲ್ಲಿ ನರೆದಂತಹ ಭಕ್ತರು ಸಿಎಂ ಅವರ ಜೊತೆ ಸೆಲ್ಫಿ ತೆಗೆಯಲು ಮುಂದಾದರು. ಅಲ್ಲಿಂದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶಿಗ್ಗಾಂವ ಗೆ ತೆರಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!