ಫೆ.27ರಿಂದ ವಿಧಾನಸೌಧದಲ್ಲಿ ಪುಸ್ತಕ ಮೇಳ, ಸಿದ್ದರಾಮಯ್ಯರಿಂದ ಉದ್ಘಾಟನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ನಾಲ್ಕು ದಿನಗಳ ಕಾಲ ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ.

ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಪುಸ್ತಕ ಮೇಳ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕವಿಗೋಷ್ಠಿಯೂ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಫೆ.27ರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೃಹತ್ ಪುಸ್ತಕ ಮೇಳವನ್ನು ಉಧ್ಘಾಟನೆ ಮಾಡಲಿದ್ದಾರೆ. ಸರ್ಕಾರದ ಹಲವು ಸಚಿವರು ಹಾಗೂ ಪ್ರತಿಷ್ಠಿತ ಸಾಹಿತಿಗಳು ಕೂಡ ಈ ಪುಸ್ತಕ ಮೇಳದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯವಾಗಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ್ ಮತ್ತು ಸಾಹಿತಿ ದಾಮೋದರ್ ಮೌಜು ಭಾಗಿಯಾಗುತ್ತಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅನೇಕ ಬರಹಗಾರರು ತಮ್ಮ-ತಮ್ಮ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ ಮತ್ತು ಪ್ರತಿಯೊಂದು ಭಾಷಾ ಅಕಾಡೆಮಿಗಳಿಗೆ ಮೀಸಲಾದ ಸ್ಟಾಲ್ ಇರುತ್ತದೆ. ಇದಲ್ಲದೆ, ಮಕ್ಕಳ ಸಾಹಿತ್ಯ, ಸಿನಿಮಾ, ಸಂವಿಧಾನ ಮತ್ತು ಕನ್ನಡ ಸಾಹಿತ್ಯದಂತಹ ವಿಷಯಗಳ ಕುರಿತು ಬರಹಗಾರರು ಮತ್ತು ತಜ್ಞರೊಂದಿಗೆ ಪ್ರತಿದಿನ ಸಂವಾದ ನಡೆಯಲಿದೆ.

ಶಾಲೆಗಳಿಂದ ಬರುವ ಮಕ್ಕಳಿಗೆ ವಿಧಾನಸಭೆ ಸಭಾಂಗಣಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗುವುದು. ಪುಸ್ತಕಗಳನ್ನು ಖರೀದಿಗೆ ಮತ್ತು ಶಾಲೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲು 2 ಲಕ್ಷ ರೂಪಾಯಿ ಅನುದಾನವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!