ಮೋದಿಯವರ ಜೀವನ ಮತ್ತು ಕೃತಿಗಳ ಕುರಿತು ಬ್ರೈಲ್ ಲಿಪಿಯಲ್ಲಿ ಪುಸ್ತಕ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಆರ್​ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್​​​​ ಪ್ರಕಾಶನದಲ್ಲಿ ಪ್ರಕಟವಾದ ಪ್ರಧಾನಿ ನರೇಂದ್ರ ಮೋದಿ ಜೀವನ ಮತ್ತು ಕೃತಿಗಳ ಕುರಿತು ಬ್ರೈಲ್ ಲಿಪಿಯಲ್ಲಿ ಬರೆಯಲಾದ ‘A Promised Nation Hon’ble Shri Narendra Modi- the Maker of New India’ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ.

ಪ್ರಧಾನಿ ಮೋದಿಯವರ ಕುರಿತು ಬರೆದಿರುವ ಈ ಪುಸ್ತಕದ ಸಂಪಾದಕರು ಹುಬ್ಬಳ್ಳಿಯವರು ಎಂಬುದು ಹೆಮ್ಮೆಯ ವಿಷಯ. ಧಾರವಾಡ ಸಂಸದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನಮ್ಮ ಸಂಸ್ಥೆ ಹುಬ್ಬಳ್ಳಿ ವಿಆರ್ ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಪ್ರಕಟಿಸಿರುವ ಪುಸ್ತಕವನ್ನು ಶ್ಲಾಘಿಸಿದರು.

ಬ್ರೈಲ್ ಲಿಪಿಯಲ್ಲಿ ಬರೆಯಲಾದ ಈ ಪುಸ್ತಕವು ದೃಷ್ಟಿಹೀನರಿಗೆ ಪ್ರಧಾನಿ ಮೋದಿಯವರ ಜೀವನ ಪಯಣದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಈ ಮಹತ್ತರ ಹೆಜ್ಜೆಯಲ್ಲಿ ನಮ್ಮ ಹುಬ್ಬಳ್ಳಿಯೂ ಭಾಗವಾಗಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಪ್ರಹ್ಲಾದ ಜೋಶಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!