ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್:‌ ವಿಪ ಸದಸ್ಯ ಗಣಪತಿ ಉಳ್ವೇಕರ್‌ ರಿಂದ ಚಾಲನೆ

ಹೊಸದಿಗಂತ ವರದಿ, ಅಂಕೋಲಾ:

ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗಾಗಿ ನೀಡಲಾಗುತ್ತಿರುವ ಬೂಸ್ಟರ್ ಡೋಸ್ ನೀಡಿಕೆ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರು ತಾಲೂಕು ಆಸ್ಪತ್ರೆಯಲ್ಲಿ ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೋವಿಡ್ ನಮ್ಮಲ್ಲಿ ಸಾಕಷ್ಟು ಸಾವು ನೋವು ತಂದಿದ್ದು ಜನರು ಇದನ್ನು ಹಗುರವಾಗಿ ಪರಿಗಣಿಸದೇ ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದರು.
ಅಧ್ಯಕ್ಷತೆಯನ್ನು ಪುರಸಭೆಯ ಅಧ್ಯಕ್ಷರಾದ ಶಾಂತಲಾ ನಾಡಕರ್ಣಿ ವಹಿಸಿದ್ದರು. ಉಪಾಧ್ಯಕ್ಷೆ ರೇಖಾ ಗಾಂವಕರ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ನಾಯ್ಕ, ತಹಶೀಲ್ದಾರ್ ಉದಯ ಕುಂಬಾರ, ವೈದ್ಯಾಧಿಕಾರಿ ಡಾ. ನಿತೀನ ಹೊಸಮೇಲಕರ್, ಆರೋಗ್ಯಾಧಿಕಾರಿ ಡಾ. ಮಹೇಂದ್ರ ನಾಯಕ ಇದ್ದರು. ಜ್ಯೋತಿ ನಾಯಕ ನಿರ್ವಹಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!