Sunday, February 5, 2023

Latest Posts

ಕಲಬುರಗಿಯಲ್ಲಿ ಸಚಿವ ನಿರಾಣಿಯಿಂದ ಬೂತ್ ವಿಜಯ್ ಅಭಿಯಾನಕ್ಕೆ ಚಾಲನೆ

ಹೊಸದಿಗಂತ ವರದಿ, ಕಲಬುರಗಿ:

ಬೂತ್ ವಿಜಯ ಅಭಿಯಾನ ಅಂಗವಾಗಿ, ಜನವರಿ 2 ರಿಂದ 12 ರ ವರೆಗೂ ಪ್ರತಿ ಬೂತ್ ನಲ್ಲಿ ಬಿಜೆಪಿ ಧ್ವಜರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಲಬುರಗಿ ಉತ್ತರ ಮತ ಕ್ಷೇತ್ರದ ಶ್ರೀ ಅಟಲ ಬಿಹಾರಿ ವಾಜಪೇಯಿ ಮಹಾ ಶಕ್ತಿ ಕೆಂದ್ರದಲ್ಲಿ ಬರುವ ವಾರ್ಡ ನಂ 7 ರಲ್ಲಿ ಬರುವ ಭೂತ ಸಂಖ್ಯೆ 81 ರಲ್ಲಿ ಭೂತ ಅಧ್ಯಕ್ಷರ ಮನೆಯ ಮೆಲೆ ಉಸ್ತುವಾರಿ ಸಚಿವರಾದ ಶ್ರೀ ಮರಗೇಶ ನಿರಾಣಿ ಅವರು ಧ್ವಜ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಸಂಘಟನೆಯ ಕುರಿತು ವಿಷಯ ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಡಾ.ಬಿ ಜಿ ಪಾಟೀಲ,ಬಿಜೆಪಿ ಗ್ರಾಮಂತರ ಅಧ್ಯಕ್ಷರು ಶಿವರಾಜ್ ಪಾಟೀಲ ,ಬಿಜೆಪಿ ಪ್ರದಾನ ಕಾರ್ಯದರ್ಶಿ ಉಮೇಶ ಪಾಟೀಲ,ಅಶೊಕ ಮಾನಕರ ಮಂಡಲ ಅಧ್ಯಕ್ಷರು,ಮಹಾನಗರ ಪಾಲಿಕೆಯ ಸದಸ್ಯರು ಕೃಷ್ಣ ನಾಯಕ,ಹಿರಿಯರಾದ ಬಸವರಾಜ ಪಾಟೀಲ,ಸಿದ್ದು ಅಷ್ಟಗಿ,ಮಹಾ ಶಕ್ತಿ ಕೆಂದ್ರ ಅಧ್ಯಕ್ಷರು ಸುರೆಶ ಹೊನಗುಂಡಿ,ಶಕ್ತಿ ಕೆಂದ್ರ ಅಧ್ಯಕ್ಷರು ಶೇಖರ ಜಮಾದರ,ಭೂತ ಅಧ್ಯಕ್ಷರು ಸುನಿಲ ಸಲಾಂಕರ, ಮಹಾನಗರ ಪಾಲಿಕೆಯ ಸದಸ್ಯರು,ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!