September 13, 2026
Sunday, September 13, 2026
spot_img

ಅವಲಕ್ಕಿ ಉಪ್ಪಿಟ್ಟು ತಿಂದು ಬೋರ್ ಆಯ್ತಾ? ಹಾಗಿದ್ರೆ 10 ನಿಮಿಷದಲ್ಲಿ ಮಾಡಿ ಈ ‘ಪೋಹಾ ನಗ್ಗೆಟ್ಸ್’

ಗಟ್ಟಿ ಅವಲಕ್ಕಿ

ಆಲೂಗಡ್ಡೆ

ಈರುಳ್ಳಿ

ಹಸಿಮೆಣಸಿನಕಾಯಿ

ಅಚ್ಚ ಖಾರದ ಪುಡಿ

ಗರಂ ಮಸಾಲೆ

ಚಾಟ್ ಮಸಾಲೆ

ಕಡಲೆ ಹಿಟ್ಟು ಅಥವಾ ಕಾರ್ನ್‌ಫ್ಲೋರ್

ಕೊತ್ತಂಬರಿ ಸೊಪ್ಪು

ಉಪ್ಪು

ಎಣ್ಣೆ

ಮೊದಲು ಗಟ್ಟಿ ಅವಲಕ್ಕಿಯನ್ನು ಎರಡೂ ಬಾರಿ ನೀರಲ್ಲಿ ನೀಟಾಗಿ ತೊಳೆದು, ನೀರೆಲ್ಲಾ ಬಸಿದು 5 ನಿಮಿಷ ಪಕ್ಕಕ್ಕೆ ಇಡಿ. ಅವಲಕ್ಕಿ ಮೆತ್ತಗಾಗಬೇಕು. ಈಗ ಒಂದು ಅಗಲವಾದ ಬೌಲ್‌ಗೆ ಮೆತ್ತಗಾದ ಅವಲಕ್ಕಿ, ಬೇಯಿಸಿದ ಆಲೂಗಡ್ಡೆ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಅಚ್ಚ ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

ಎಲ್ಲವನ್ನೂ ಕೈಯಲ್ಲೇ ಚನ್ನಾಗಿ ನಾದಿ ಕಲಿಸಿ. ಶೇಪ್ ಸಿಗಲಿಕ್ಕೆ ಮತ್ತು ಕ್ರಿಸ್ಪಿ ಆಗಲಿಕ್ಕೆ 2-3 ಸ್ಪೂನ್ ಕಡಲೆ ಹಿಟ್ಟು ಅಥವಾ ಕಾರ್ನ್‌ಫ್ಲೋರ್ ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಕಲಸಿದ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ. ನಿಮಗಿಷ್ಟ ಬಂದ ಶೇಪ್‌ಗೆ ತಟ್ಟಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಕಾಯೋಕೆ ಇಡಿ. ಎಣ್ಣೆ ಚನ್ನಾಗಿ ಕಾದ ಮೇಲೆ, ಮೀಡಿಯಂ ಉರಿಯಲ್ಲಿ ಇಟ್ಟುಕೊಂಡು ಮಾಡಿಟ್ಟುಕೊಂಡ ನಗ್ಗೆಟ್ಸ್‌ಗಳನ್ನು ಒಂದೊಂದಾಗಿ ಬಿಡಿ. ಒಂದು ಕಡೆ ಲೈಟಾಗಿ ಬೆಂದ ಮೇಲೆ ಉಲ್ಟಾ ಹಾಕಿ. ಎರಡೂ ಕಡೆ ಗೋಲ್ಡನ್ ಬ್ರೌನ್ ಬಣ್ಣ ಬಂದು, ಹೊರಗಡೆ ಕ್ರಿಸ್ಪಿ ಆಗೋವರೆಗೂ ಫ್ರೈ ಮಾಡಿ.

ಈಗ ಬಿಸಿಬಿಸಿಯಾದ, ಖಾರ-ಖಾರವಾದ ಪೋಹಾ ನಗ್ಗೆಟ್ಸ್ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !