ಸಾಮಾಗ್ರಿಗಳು
ಟೊಮೆಟೊ – ಅರ್ಧ ಕೆಜಿ
ಕೊತ್ತಂಬರಿ ಸೊಪ್ಪು – ಒಂದು ಹಿಡಿಯಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಉದ್ದಿನಬೇಳೆ- ಎರಡು ಟೀಸ್ಪೂನ್
ಹಸಿಮೆಣಸಿನಕಾಯಿ – 10ರಿಂದ 12
ಜೀರಿಗೆ – ಅರ್ಧ ಟೀಸ್ಪೂನ್
ಬೆಳ್ಳುಳ್ಳಿ – 5 ಲವಂಗ
ಹುಣಸೆಹಣ್ಣು – ಸ್ವಲ್ಪ
ಅರಿಶಿಣ – ಸ್ವಲ್ಪ
ಉಪ್ಪು – ಸಾಕಷ್ಟು
ಮಾಡುವ ವಿಧಾನ
ಮೊದಲು ಎಲ್ಲಾ ಟೊಮೆಟೊಗಳನ್ನು ಚಿಕ್ಕದಾಗಿ ಪೀಸ್ ಮಾಡಿಕೊಳ್ಳಿ, ಬಳಿಕ ಕೊತ್ತಂಬರಿ ಸೊಪ್ಪನ್ನು ತೊಳೆದುಕೊಂಡು ಪಕ್ಕಕ್ಕೆ ಇಡಿ. ಈಗ ಒಲೆಯ ಮೇಲೆ ಬಾಣಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಉದ್ದಿನ ಬೇಳೆ ಸೇರಿಸಿ. ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ. ಇದನ್ನು ಮಿಕ್ಸಿಂಗ್ ಜಾರ್‌ಗೆ ಹಾಕಿ ಪಕ್ಕಕ್ಕೆ ಇಟ್ಟುಕೊಳ್ಳಿ.
ಅದರ ಬಳಿಕ ಹಸಿ ಮೆಣಸಿನಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದೇ ಬಾಣಲೆಯಲ್ಲಿ ಹಾಕಿ. ಇವುಗಳನ್ನು ಚೆನ್ನಾಗಿ ಫ್ರೈ ಮಾಡಿ ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಈಗ ಅದೇ ಎಣ್ಣೆಯಲ್ಲಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಹಸಿರು ವಾಸನೆ ಹೋಗುವವರೆಗೆ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. ಸಾಕಾಗದಿದ್ದರೆ ಎಣ್ಣೆಯನ್ನು ಸೇರಿಸಿ.
ಕೊತ್ತಂಬರಿ ಸೊಪ್ಪು ಚೆನ್ನಾಗಿ ಹುರಿದ ನಂತರ ತಟ್ಟೆಗೆ ತೆಗೆದುಕೊಂಡು ಪಕ್ಕಕ್ಕೆ ಇಡಿ. ಈಗ ಟೊಮೆಟೊ ಪೀಸ್ಗಳನ್ನು ಫ್ರೈ ಮಾಡಿ. ಇದಕ್ಕೆ ಬೇಕಾದಷ್ಟು ಎಣ್ಣೆಯನ್ನು ಅದೇ ಬಾಣಲೆಗೆ ಹಾಕಿಕೊಳ್ಳಬೇಕಾಗುತ್ತದೆ. ಎಣ್ಣೆ ಬಿಸಿಯಾದ ನಂತರ ಕತ್ತರಿಸಿದ ಟೊಮೆಟೊ ಚೂರುಗಳು ಹಾಗೂ ಸ್ವಲ್ಪ ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಅದರ ನಂತರ ಪ್ಯಾನ್ ಮೇಲೆ ಮುಚ್ಚಳ ಮುಚ್ಚಿ ಹಾಗೂ ಮಧ್ಯಮ ಉರಿಯಲ್ಲಿ ಸ್ಟೌವ್ ಇಡಿ. ಟೊಮೆಟೊ ಪೀಸ್ಗಳು ಚೆನ್ನಾಗಿ ಬೇಯಲು ಬಿಡಿ. ಇವುಗಳು ಕುದಿಯುತ್ತಿರುವಾಗ ಮಧ್ಯೆ ಮುಚ್ಚಳವನ್ನು ತೆರೆದು ಮಿಶ್ರಣ ಮಾಡಿ. ಟೊಮೆಟೊ ಪೀಸ್ಗಳು ಚೆನ್ನಾಗಿ ಬೆಂದ ಬಳಿಕ, ಅವುಗಳನ್ನು ತೆಗೆದುಕೊಂಡು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕಾಗುತ್ತದೆ.
ಮಿಕ್ಸಿಂಗ್ ಜಾರ್‌ನಲ್ಲಿ ಹಸಿಮೆಣಸಿನಕಾಯಿ ಮತ್ತು ಉದ್ದಿನ ಬೇಳೆ, ಜೀರಿಗೆ, ಉಪ್ಪು, ಬೆಳ್ಳುಳ್ಳಿ ಮತ್ತು ಹುಣಸೆಹಣ್ಣು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಾದ ನಂತರ ತಣ್ಣಗಾದ ಟೊಮೆಟೊ ಚೂರುಗಳನ್ನು ಸೇರಿಸಬೇಕಾಗುತ್ತದೆ. ಪಕ್ಕಕ್ಕೆ ಇಟ್ಟಿರುವ ಕೊತ್ತಂಬರಿ ಸೊಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿಕೊಂಡ್ರೆ ಚಟ್ನಿ ರೆಡಿ