ಆಹಾ..ಬಾಯಲ್ಲಿಟ್ಟರೆ ಕರಗುವ ಸೋರೆಕಾಯಿ ಚಪಾತಿ.!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸದಾ ಖಾಲಿ ಚಪಾತಿ ಬೋರಾಗಿದ್ದರೆ, ಅಥವಾ ಚಪಾತಿ ಜೊತೆ ಪಲ್ಯ, ಚಟ್ನಿ ಮಾಡಲು ಪುರುಸೊತ್ತಿಲ್ಲದಿದ್ದರೆ. ಈ ಸೋರೆಕಾಯಿ ಚಪಾತಿ ಮಾಡಿ. ತಿನ್ನೋಕೆ ಮೆತ್ತಗೆ ರುಚಿಯಾಗಿ ಜೊತೆಗೆ ಸೈಡ್‌ ಡಿಶ್‌ ಕೂಡ ಅಗತ್ಯವಿಲ್ಲ.

ಬೇಕಾಗುವ ಪದಾರ್ಥಗಳು: 

2 1/2 ಕಪ್ ಗೋಧಿ ಹಿಟ್ಟು
2 ಕಪ್ ಸೋರೆಕಾಯಿ ತುರಿ
ಉಪ್ಪು
1/2 ಟೀಸ್ಪೂನ್ ಗರಂ ಮಸಾಲಾ
1 ಟೀಸ್ಪೂನ್ ಹಸಿರು ಮೆಣಸಿನ ಪುಡಿ
1/2 ಟೀಸ್ಪೂನ್ ಮೆಣಸು ಪುಡಿ
ಇಂಗು – ಒಂದು ಚಿಟಿಕೆ(ಆಯ್ಕೆ)
ನೀರು
ಎಣ್ಣೆ

ಮಾಡುವ ವಿಧಾನ: 

ಒಂದು ಮಿಕ್ಸಿಂಗ್‌ ಬೌಲ್‌ಗೆ ಗೋಧಿ ಹಿಟ್ಟು, ಉಪ್ಪು, ಮೆಣಸಿನಕಾಯಿ ಪುಡಿ, ಗರಂ ಮಸಾಲಾ, ಇಂಗು ಹಾಕಿ ಬೆರೆಸಿ ನಂತರ ಇದಕ್ಕೆ ತುರಿದ ಸೋರೆಕಾಯಿ ಹಾಕಿ ಚೆನ್ನಾಗಿ ಕಲಸಿ. ಸೋರೆಕಾಯಿಯಲ್ಲಿ ನೀರು ಹೆಚ್ಚಾಗಿರುವುದರಿಂದ ನೋಡಿಕೊಂಡು ನೀರು ಬಳಸಿ ಚೆನ್ನಾಘಿ ಹಿಟ್ಟನ್ನು ನಾದಿ. ಕೊನೆಗೆ ಎರಡು ಚಮಚ ಎಣ್ಣೆ ಹಾಕಿ ಕಲಸಿ ಹತ್ತರಿಂದ ಹದಿನೈದು ನಿಮಿಷ ಪಕ್ಕಕ್ಕಿಡಿ. ಆ ನಂತರ ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಒತ್ತಡ ಹಾಕದೆ ಹಿಟ್ಟು ಉದುರಿಸಿಕೊಂಡು ಚಪಾತಿ ಲಟ್ಟಿಸಿ. ಚಪಾತಿ ಕಾವಲಿಗೆ ಎಣ್ಣೆ ಹಾಕದೆ ಒಂದು ಬದಿ ಬೇಯಿಸಿ ತಿರುವಿಹಾಕಿದ ಬಳಿಕ ಎಣ್ಣೆ ಹಾಕಿ. ಎರಡೂ ಕಡೆ ಹೀಗೆ ಮಾಡಿದ್ರೆ ಮುಗೀತು. ಯಾವುದೇ ಸೈಡ್‌ ಡಿಶ್‌ ಇಲ್ಲದೆಯೂ ಚಪಾತಿ ಸವಿಯಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!