ಬಾಲಿವುಡ್‌ ನಲ್ಲಿ ಬಾಯ್‌ ಕಾಟ್‌ ಬಿಸಿ: ಕಿಂಗ್‌ ಖಾನ್‌ ಶಾರುಖ್‌ ಸಿನಿಮಾ ಪಠಾಣ್ ಕತೆಯೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್‌ ನಲ್ಲಿ ಇದೀಗ ಬಾಯ್‌ ಕಾಟ್‌ ಧ್ವನಿ ಬಲುಜೋರಾಗಿ ಕೇಳಿಬರುತ್ತಿದ್ದು, ಇದರಿಂದ ಅನೇಕ ಸಿನಿಮಾಗಳು ಬಾಕ್ಸ್‌ ಆಫೀಸ್‌ ನಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಕಲೆಕ್ಷನ್‌ ಮಾಡುತ್ತಿಲ್ಲ. ಇದಕ್ಕೆ ಸಾಕ್ಷಿಯಾಗಿ ಆಮಿರ್‌ ಖಾನ್‌ ಅವರ ʼಲಾಲ್‌ ಸಿಂಗ್‌ ಚಡ್ಡಾʼ, ಅಕ್ಷಯ್‌ ಕುಮಾರ್‌ ನಟನೆಯ ʼರಕ್ಷಾ ಬಂಧನ್‌ʼ .

ಇತ್ತೀಚೆಗೆ ರಿಲೀಸ್‌ ಗೂ ಮುನ್ನ ವಿವಾದದ ಕೇಂದ್ರ ಬಿಂದುವಾಗಿದ್ದ ಆಮಿರ್‌ ಖಾನ್‌ ʼಲಾಲ್‌ ಸಿಂಗ್‌ ಚಡ್ಡಾʼ ಬಾಯ್‌ ಕಾಟ್‌ ಅಭಿಯಾನಕ್ಕೆ ತುತ್ತಾಯಿತು.

ನಟ ಹೃತಿಕ್‌ ರೋಷನ್‌ ʼಲಾಲ್‌ ಸಿಂಗ್‌ ಚಡ್ಡಾʼ ಚಿತ್ರವನ್ನು ನೋಡಿದ ಬಳಿಕ, ಸಿನಿಮಾಕ್ಕೆ ಬೆಂಬಲ ಕೊಟ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದನ್ನೇ ವಿಷಯವಾಗಿಸಿಕೊಂಡ ಕೆಲವರು ಹೃತಿಕ್‌ ರೋಷನ್‌ ರನ್ನು ಬಾಯ್ಕಾಟ್‌ ಅಭಿಯಾನದ ವಸ್ತುವನ್ನಾಗಿ ಮಾಡಿದೆ. ಅವರ ಮುಂದಿನ ಚಿತ್ರ ʼವಿಕ್ರಂ ವೇದʼವನ್ನು ನಿಷೇಧಿಸಿ, ಚಿತ್ರವನ್ನು ವೀಕ್ಷಿಸಬೇಡಿ ಎಂದು ಪೋಸ್ಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

ಇದೀಗ ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಗೂ ಬಾಯ್ಕಾಟ್‌ ಬಿಸಿ ತಟ್ಟಿದೆ. ಅವರ ಮುಂದಿನ ಚಿತ್ರ ʼಪಠಾಣ್ʼ ನಿಷೇಧಿಸಿಯೆಂದು ಅಭಿಯಾನ ಶುರುವಾಗಿದೆ.

ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್‌ ಅಬ್ರಹಾಂ ಕೂಡ ನಟಿಸುತ್ತಿದ್ದಾರೆ. ಪಠಾಣ್‌ ನೋಡಬೇಡಿ ಪ್ರಭಾಸ್‌ ಅವರ ʼಆದಿಪುರುಷ್‌ʼ ಚಿತ್ರವನ್ನು ಬೆಂಬಲಿಸಿಯೆಂದು ಕೆಲವರು ಬಾಯ್ಕಾಟ್‌ ಕೂಗಿಗೆ ಧ್ವನಿಯಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!