ಬಾಯ್ಕಾಟ್​ ಚೆನ್ನೈ ಸೂಪರ್​ ಕಿಂಗ್ಸ್: ಅಭಿಮಾನಿಗಳಿಂದ ಹೆಚ್ಚುತ್ತಿದೆ ಆಕ್ರೋಶಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್​ ಮೆಗಾ ಹರಾಜಿನಲ್ಲಿ ಎಲ್ಲ ತಂಡಗಳು ಭರ್ಜರಿ ಹಣ ಸುರಿಯುವ ಮೂಲಕ ತಮ್ಮ ತಂಡವನ್ನು ಬಲಿಷ್ಠ ಮಾಡಿದ್ದಾರೆ. ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಹೊಸ ಮುಖಗಳನ್ನು ಸೆಳೆಯುವ ಮೂಲಕತಂಡವನ್ನು ಗಟ್ಟಿಗೊಳಿಸಿದ್ದಾರೆ.
ಆದರೆ ಇದೀಗ ತಂಡದ ಆಯ್ಕೆಯ ಬಿರುಸಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಡವಿದ್ದು, ತಂಡದ ವಿರುದ್ದ ಭಾರೀ ಆಕ್ರೋಶಗಳು ಕೇಳಿ ಬರುತ್ತಿದೆ.
ಹೌದು, ಚೆನ್ನೈ ಸೂಪರ್​ ಕಿಂಗ್ಸ್​ ಅತೀ ಹೆಚ್ಚು ತಮಿಳು ಅಭಿಮಾನಿಗಳನ್ನು ಹೊಂದಿರುವ ತಂಡ. ಆದರೆ ಈಗ ಅದೇ ಅಭಿಮಾನಿಗಳು ಚೆನ್ನೈ ತಂಡವನ್ನ ಬ್ಯಾನ್​ ಮಾಡಿ ಎನ್ನುತ್ತಿದ್ದಾರೆ.ಇದಕ್ಕೆ ಕಾರಣ ಸಿಎಸ್​ಕೆ ತಂಡವು ಶ್ರೀಲಂಕಾ ಆಟಗಾರನನ್ನು ಖರೀದಿಸಿರುವುದು.
ಶ್ರೀಲಂಕಾದ ಯುವ ಸ್ಪಿನ್ನರ್ ಮಹೇಶ್ ತೀಕ್ಷಣ ಅವರನ್ನು ಚೆನ್ನೈ ಸೂಪರ್​ ಕಿಂಗ್ಸ್ ಖರೀದಿಸಿರುವುದಕ್ಕೆ ಅನೇಕ ಸಿಎಸ್​ಕೆ ಅಭಿಮಾನಿಗಳು ವಿರೋಧಿಸಲಾರಂಭಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ತಂಡದ ವಿರುದ್ಧ ಅಭಿಯಾನ ಕೂಡ ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ #BoycottChennaiSuperKings ಎಂದು ಹ್ಯಾಶ್​ಟ್ಯಾಗ್ ರಚಿಸಲಾಗಿದೆ.
ಸಿಎಸ್​ಕೆ ತಂಡದ ಕೆಲ ಅಭಿಮಾನಿಗಳು ಶ್ರೀಲಂಕಾ ಸ್ಪಿನ್ನರ್ ಮಹೇಶ್ ತೀಕ್ಷಣ ಅವರ ಖರೀದಿಯನ್ನು ವಿರೋಧಿಸಲು ಕಾರಣ ಅವರು ಸಿಂಹಳೀಯ ಮೂಲದವರು ಎಂಬುದು. 2009 ರಲ್ಲಿ, ಶ್ರೀಲಂಕಾ ಎಲ್‌ಟಿಟಿಇ ವಿರುದ್ಧ ಮಿಲಿಟರಿ ಕ್ರಮ ಕೈಗೊಂಡಾಗ, ಸಿಂಹಳೀಯ ಮೂಲದ ಸೈನಿಕರು ಶ್ರೀಲಂಕಾ ತಮಿಳರ ಮೇಲೆ ದೌರ್ಜನ್ಯ ಎಸೆಗಿದ್ದರು. ಅಲ್ಲದೆ ತಮಿಳರನ್ನು ಬೇಕಂತಲೇ ದಾಳಿ ಗುರಿಮಾಡಿದ್ದರು. ಆಗಿನಿಂದ ಸಿಂಹಳೀಯರು ಮತ್ತು ತಮಿಳಿಗರ ನಡುವೆ ವೈರತ್ಯ ಏರ್ಪಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!