ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿವಿಧ ವಿಡಿಯೋಗಳು ವೈರಲ್ ಆಗುತ್ತಿವೆ. ಅವುಗಳಲ್ಲಿ ಕೆಲವು ತಮಾಷೆಯಾಗಿವೆ, ಕೆಲವು ವಿಚಾರ ಪ್ರಚೋದಕವಾಗಿದ್ದರೆ ಇನ್ನೂ ಕೆಲವು ಕೋಪೋದ್ರಿಕ್ತವಾಗಿವೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಮೂವರು ಯುವಕರು ಚಲಿಸುತ್ತಿರುವ ರೈಲಿ ಬಳಿ ನಿಂತು ಸಾಹಸ ಮೆರೆದಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ರಾಜಸ್ಥಾನದ ಗೋರಂ ಘಾಟ್‌ನಲ್ಲಿ ಈ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ರಾಜಸ್ಥಾನದ ಆಹ್ಲಾದಕರ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು ರಾಜಸ್ಥಾನ ಕಾಶ್ಮೀರ ಎಂದೂ ಕರೆಯುತ್ತಾರೆ. ಆದರೆ ಆ ಪ್ರದೇಶದಲ್ಲಿ ರೈಲುಗಳು ತುಂಬಾ ಜನದಟ್ಟಣೆ ಮತ್ತು ವೇಗವಾಗಿ ಕೂಡಿರುತ್ತವೆ.
ವೈರಲ್ ವೀಡಿಯೊದಲ್ಲಿ, ಪ್ರಯಾಣಿಕರಿಂದ ರೈಲು ತುಂಬಿ ತುಳುಕುತ್ತಿದ್ದು, ಫುಟ್ ಬೋರ್ಡಿನ ಮೇಲೂ ಜನ ಕುಳಿತುಕೊಳ್ಳಲಾಗದೆ ರೈಲಿನ ಮೇಲೇರಿದ್ದರು. ಸೇತುವೆ ತುಂಬಾ ಕಿರಿದಾಗಿದ್ದು, ಪಕ್ಕಕ್ಕೆ ಸರಿಯಲು ಜಾಗವಿಲ್ಲ. ಇಂತಹ ಜಾಗದಲ್ಲಿ ಯುವಕರು ಯಾವುದೇ ಭಯವಿಲ್ಲದೆ ನಿಂತು ವಿಡಿಯೋ ಮಾಡಿದ್ದಾರೆ. ರೈಲು ಬರುತ್ತಿದ್ದಂತೆ ಮೂವರು ಹಳಿ ಹಿಡಿದು ನಿಲ್ಲಲು ಪ್ರಯತ್ನಿಸಿದರೂ ಒಬ್ಬ ಮೊದಲೇ ಕೆಳಗೆ ಬಿದ್ದಿದ್ದಾನೆ. ಮತ್ತೊಬ್ಬ ವೇಗ ತಡೆಯಲಾಗದೆ ಆಯತಪ್ಪಿ ಕೆಳಗೆ ಬಿದ್ದಿರುವ ದೃಶ್ಯ ಭಯಾನಕವಾಗಿದೆ.
ಈ ವೀಡಿಯೋ ನೋಡಿದ ನೆಟ್ಟಿಗರು ಯುವಕರಿಗೆ ಬುದ್ಧಿ ಇಲ್ಲ ಎಂದು ಬೈಯುತ್ತಿದ್ದಾರೆ. ಪ್ರಾಣದ ಜೊತೆ ಆಟ ಆಡುವುದು ಎಂದರೆ ಇದೇ ಎಂದು ಕಿಡಿ ಕಾರಿದರು.