ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಜೈಲು ಪ್ರವೇಶಿಸಿದ ವಿಡಿಯೋ ಮತ್ತು ಛಾಯಾಚಿತ್ರಗಳು ಇದೀಗ ಎಲ್ಲೆಡೆ ವೈರಲ್ ಆಗಿದೆ. ದರ್ಶನ್ ಜೈಲು ಪ್ರವೇಶಿಸಿದಾಗ ಕೂಲಿಂಗ್ ಗ್ಲಾಸ್ ಹಾಕಿಕೊಂಡಿದ್ದರು. ಬ್ರ್ಯಾಂಡೆಡ್ ಟಿ ಶರ್ಟ್ ಕೂಡ ಹಾಕಿಕೊಂಡಿದ್ದರು. ಅವರ ಕೈಯಲ್ಲಿ ಕಡಗ ಇತ್ತು.
ದರ್ಶನ್ ಜೈಲು ಪ್ರವೇಶಿಸುವ ವೇಳೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಪೊಲೀಸರ ಸಮ್ಮುಖದಲ್ಲಿಯೇ ಅವರು ಜೈಲು ಪ್ರವೇಶಿಸಿದರು. ಮೊದಲು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ಬಳ್ಳಾರಿ ಜೈಲು ನಿಯಮಗಳನ್ನು ಪಾಲಿಸುವಂತೆ ದರ್ಶನ್‌ಗೆ ಆದೇಶ ನೀಡಲಾಗಿತ್ತು. ಹೀಗಾಗಿ ದರ್ಶನ್ ಕೊರಳಿಗೆ ಹಾಕಿದ್ದ ಬೆಳ್ಳಿ ಕಡಗ, ಸನ್ಗ್ಲಾಸ್, ಕತ್ತಿನಲ್ಲಿ ಹಾಕಿದ್ದ ಮಣಿ ಸರ ಹಾಗೂ ದಾರವನ್ನು ಪೊಲೀಸರು ಬಿಚ್ಚಿಟ್ಟರು.
ಸೆ.9ರವರೆಗೆ ದರ್ಶನ್ ರಿಮಾಂಡ್ ವಿಸ್ತರಣೆಯಾಗಿದ್ದು, ಅಲ್ಲಿಯವರೆಗೆ ದರ್ಶನ್ ಬಳ್ಳಾರಿ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಮುಂದೇನಾಗುತ್ತದೋ ಕಾದು ನೋಡಬೇಕು.