ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಸ್ಲಿಂ ಶಾಸಕರಿಗೆ ಶುಕ್ರವಾರದಂದು ಎರಡು ಗಂಟೆಗಳ ನಮಾಜ್ ವಿರಾಮ ನೀಡುವ ದಶಕಗಳ ಹಿಂದಿನ ನಿಯಮವನ್ನು ರದ್ದುಗೊಳಿಸಲು ಅಸ್ಸಾಂ ವಿಧಾನಸಭೆ ನಿರ್ಧರಿಸಿದೆ.
ಸದನದ ಕಲಾಪವನ್ನು ಇತರ ದಿನಗಳಂತೆ ಶುಕ್ರವಾರವೂ ಮುಂದುವರಿಸಲು ವಿಧಾನಸಭೆ ನಿಯಮಗಳ ಸಮಿತಿ ಇಂದು ನಿರ್ಣಯವನ್ನು ಅಂಗೀಕರಿಸಿದೆ.
ಇಂದಿನವರೆಗೂ, ಮುಸ್ಲಿಂ ಶಾಸಕರು ನಮಾಜ್ ಪ್ರಾರ್ಥನೆಗೆ ಹಾಜರಾಗುವುದಕ್ಕಾಗಿ ಅಸ್ಸಾಂ ವಿಧಾನಸಭೆಯನ್ನು ಶುಕ್ರವಾರದಂದು ಎರಡು ಗಂಟೆಗಳ ಕಾಲ ಮುಂದೂಡಲಾಗುತ್ತಿತ್ತು.
ಅಸ್ಸಾಂ ಶಾಸಕಾಂಗ ಸಭೆ ರಚನೆಯಾದಾಗಿನಿಂದ, ಮುಸ್ಲಿಂ ಸದಸ್ಯರಿಗೆ ನಮಾಜ್ ಮಾಡಲು ಅನುಕೂಲವಾಗುವಂತೆ ಶುಕ್ರವಾರದ ವಿಧಾನಸಭೆಯ ಅಧಿವೇಶನವನ್ನು ಬೆಳಗ್ಗೆ 11 ಗಂಟೆಗೆ ಮುಂದೂಡಲಾಗುತ್ತಿತ್ತು. ಮುಸ್ಲಿಂ ಸದಸ್ಯರು ಬಂದ ನಂತರ ಮಧ್ಯಾಹ್ನದ ಭೋಜನದ ಬಳಿಕ ಕಲಾಪವನ್ನು ಪುನರಾರಂಭಿಸುತ್ತಿತ್ತು.
ಇದೀಗ ಸ್ಪೀಕರ್ ಬಿಸ್ವಜಿತ್ ಡೈಮರಿ, ಸಂವಿಧಾನದ ಜಾತ್ಯತೀತ ಸ್ವರೂಪದ ದೃಷ್ಟಿಯಿಂದ ಅಸ್ಸಾಂ ವಿಧಾನಸಭೆಯು ಯಾವುದೇ ದಿನದಂತೆ ಶುಕ್ರವಾರದಂದು ಯಾವುದೇ ಮುಂದೂಡಿಕೆ ಇಲ್ಲದೆ ತನ್ನ ಕಲಾಪಗಳನ್ನು ನಡೆಸಬೇಕು ಎಂದು ಪ್ರಸ್ತಾಪಿಸಿದರು.
ಈ ನಿಯಮವನ್ನು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಸ್ವಾಗತಿಸಿದ್ದಾರೆ. ಆದರೆ ಪ್ರತಿಪಕ್ಷಗಳು ಈ ಕ್ರಮವನ್ನು ಟೀಕಿಸಿವೆ.